ನಮಸ್ಕಾರ...!

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು!!!


ರಚನೆ: ಹುಯಿಗೋಳ ನಾರಾಯಣ ರಾವ್, ಸಂಗೀತ: ಪಿ. ಕಾಳಿಂಗ ರಾವ್

ಈ ತಾಣದಲ್ಲಿ ತಮಗೆ,

ಕನ್ನಡದ ಮೇರು ಕೃತಿಗಳ ಆಯ್ದ ಕೆಲವು ಭಾಗಗಳು, ಕನ್ನಡ ನಾಡು, ನುಡಿ, ಜಲ,ಪರಿಸರ ಸೊಬಗು ಇತ್ಯಾದಿಗಳ ವಿಶ್ಲೇಷಣೆ, ಕನ್ನಡ ಜನ, ಭಾಷೆ, ಸಂಸ್ಕೃತಿ,ಸಾಹಿತ್ಯ,ಸಂಗೀತ,ಪರಂಪರೆಗಳ ಕಿರು ಪರಿಚಯಗಳು,
ಭೌತಿಕ, ಆಧ್ಯಾತ್ಮಿಕ ವಿಷಯಗಳು


ಸವಿಯಲು ದೊರೈಯುತ್ತದೆ !!!

..ಜೊತೆಗೆ ನನ್ನ ಕೆಲವು ವಯಕ್ತೀಕ ಅಭಿಪ್ರಾಯಗಳು!!


ಸಿರಿಗನ್ನಡಂ ಗೆಳ್ಗೆ ಸಿರಿಗನ್ನಡಂ ಬಾಳ್ಗೆ!!

Monday 8 September 2008

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ?

ನಮ್ಮ ಸಂಸ್ಕೃತಿ, ಪರಂಪರೆ ನಿಜವಾಗಲು ಅಗಾಧ. ಕನ್ನಡ ಸಾಹಿತ್ಯ ಲೋಕಕ್ಕೆ ಸಂಧಿರುವ ಗೌರವಗಳು ಅಪಾರ. ಒಂದು ಮಾಹಿತಿಯ ಪ್ರಕಾರ ನಮ್ಮ ನಾಡಿಗೆ ಬಂದಿರುವ ಙ್ನಾನಪೀಠ ಪ್ರಶಸ್ತಿಗಳು ಬಹುಶಃ ಭಾರತದ ಬೇರೆ ಯಾವುದೇ ಭಾಷೆಗೆ ಬಂದಿಲ್ಲ. ಇವೆಲ್ಲ ನಿಜಕ್ಕು ನಮಗೆ ಹೆಮ್ಮೆ ತರುವ ವಿಷಯಗಳು.

ಪ್ರತಿಯೊಬ್ಬ ಕನ್ನಡಿಗನಿಗೂ ಗೊತ್ತಿದೆ ನಮ್ಮ ಭಾಷೆ ಎಷ್ಟು ಸುಂದರ ಮತ್ತು ಅತ್ಯದ್ಭುತ ಇತಿಹಾಸ ಹೊಂದಿದೆ ಅಂತ. ನಾನು ಒಪ್ಪಿಕೊಳ್ಳುತ್ತೇನೆ, ನಮ್ಮ ಭಾಷೆಯು ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾಗಬೇಕು, ಪ್ರತಿಯೊಬ್ಬ ಭಾರತೀಯನಿಗು ಈದರ ಸೊಬಗು ತಿಳಿಯಬೇಕು. ಆದರೆ ಇದಕ್ಕೆ ಶಾಸ್ತ್ರೀಯ ಸ್ಥಾನಮಾನ ಒಂದೇ ಮಾರ್ಗವೆ ?

ಇದಕ್ಕೋಸ್ಕರ ನಾವು ಈ ಶಾಸ್ತ್ರೀಯ ಸ್ಥಾನಮಾನ ಹುಡುಕಿಕೊಂಡು ದೆಹಲಿಗೆ ಹೊಗಬೇಕೇ ? ಅದಕೋಸ್ಕರ ನಾವು ಭಿಕ್ಷೆ ಬೇಡುವುದು ಸರಿಯೆ? ಕೇಂದ್ರ ಸರ್ಕಾರಕ್ಕೆ ತೀರ್ಮಾನ ತೆಗೆದುಕೊಳ್ಳಲು ಗಡುವು ನೀಡುವುದು ಸರಿಯೆ?

ಬಹುಶಃ ಇತರಹದ ವರ್ತನೆಯಿಂದ ಭಾಷೆಗೆ, ನಾಡಿಗೆ, ನಾಡಿನ ಜನತೆಗೆ ಅವಮಾನ ಮಾಡಿದಂತೆ ಆಗುತ್ತದೆ ಹೊರತು ಮತ್ತೇನು ಅಗುವುದಿಲ್ಲ. ಇತರ ಅಂಗಲಾಚಿ ತಂದ ಪ್ರಶಸ್ತಿಗೆ ಗೌರವ, ಮರ್ಯಾದೆ ಇರುವಿದಿಲ್ಲ. ಈ ನಡುವಳಿಕೆಯಿಂದ ನಮ್ಮ ಭಾಷೆಯ ವರ್ಚಸ್ಸು ಕಮ್ಮಿಯಗುತ್ತದೆ ಹೊರತು ಜಾಸ್ತಿ ಅಗುವುದಿಲ್ಲ.

"ಭೂಮಿಯನ್ನು ಸೂರ್ಯ ತನ್ನ ಸುಂದರವಾದ ಬೆಳಿಕನಿಂದ ಪ್ರಜ್ವಲಿಸುತ್ತಾನೆ". ಆದರೆ ಅವನೆಂದು ನಮ್ಮಿಂದ ಪ್ರಶಸ್ತಿಗಳನ್ನು ಅಥವಾ ಹೊಗಳಿಕೆಗಳನ್ನು ಬಯಸುವುದಿಲ್ಲ. ಬದಲಾಗಿ ನಮ್ಮಲ್ಲಿರುವ ಅಂಧಕಾರವನ್ನು ಹೊಗಲಾಡಿಸುವ ಪ್ರಯತ್ನ ಪ್ರತಿದಿನ ಮಾಡುತ್ತಾನೆ. ಹೀಗೆ ಪ್ರಕೃತಿದತ್ತವಾಗಿ ಬಂದ ಯಾವ ವಸ್ತುಗಳು, ಜೀವಿಗಳು ಪ್ರಶಸ್ತಿಗಳನ್ನಾಗಲಿ, ಅರ್ಹತಪತ್ರಗಳನ್ನಾಗಲಿ, ಹೊಗಳಿಕೆಗಳನ್ನಾಗಲಿ ಯಾರಿಂದಲೂ ಬಯಸುವುದಿಲ್ಲ ಹಾಗಿದ್ದಮೇಲೆ ನಾವು ಯಾಕೆ ?

ಇಂತ ಭಾಷೆಗೆ ನಮ್ಮ ಕೇಂದ್ರ ಸರ್ಕಾರ ಮನ್ನಣೆ ಕೊಡದೆ, ಶಾಸ್ತ್ರೀಯ ಸ್ಥಾನಮಾನ ನಿರಾಕರಿಸಿದರೆ ಅದು ಕನ್ನಡಿಗರಿಗೆ ಮಾಡಿದ ಅವಮಾನ ಅಲ್ಲ, ಬದಲಾಗಿ ಅವರು ಒಂದು ಭಾಷೆಯ ಪರಂಪರೆಯನ್ನು ತಿಳಿಯದೆ, ಸಮಗ್ರವಾಗಿ ವಿಷಯವನ್ನು ಚರ್ಚಿಸದೆ ಕೊಟ್ಟ ಅತುರತೆಯ ಒಂದು ನಿದರ್ಶನ. ಇದು ಅವರ ವೈಫಲ್ಯತೆಯನ್ನು, ನಿಶ್ಯಕ್ತ ಮೌಲ್ಯಗಳನ್ನು ನಮಗೆಲ್ಲಾ ತೋರಿಸಿ ಕೊಟ್ಟಂತಾಗುತ್ತದೆ. ಅದು ಅವರಿಗೇ ಆದ ಅಪಮಾನ. ಅವರಲ್ಲಿರುವ ಅಙ್ನಾನದ ಪರಮಾವಧಿಯನ್ನು ತೊರೀಸುತ್ತದೆ.

ಎಲ್ಲರಿಗೂ ಗೊತ್ತಿರುವಂತೆ,

"ಸತ್ಯ ಸ್ವಲ್ಪ ತಡವಾಗಿ ಹೊರಬಂದರು ಅದರ ಬರುವಿಕೆಯನು ಯಾರು ಹಿಡಿದಿಡಲಾಗುವುದಿಲ್ಲ!!"

"ಪ್ರಶಸ್ತಿಗಳು ನಮ್ಮನ್ನ ಅರಸಿಕೊಂಡು ಬರಬೇಕು ಹೊರತು, ನಾವು ಅದನ್ನಲ್ಲ ಎಂದು ನನ್ನ ತಾಯಿ ಹೇಳುತ್ತಲೇ ಇರುತ್ತಾರೆ." ಆದ್ದರಿಂದ, ನಮ್ಮ ಪ್ರಯತ್ನ ಪ್ರಶಸ್ತಿಗಳನ್ನು ಗಳಿಸುವದರಲ್ಲಿ ಇರದೆ, ನಮ್ಮ ಭಾಷೆ, ಸಂಸ್ಕೃತಿ, ಇತಿಹಾಸ, ಪರಂಪರೆ ಗಳನ್ನು ಬೇರೆ ಭಾಷೆಗಳಿಗಿಂತ ಹೇಗೆ ಅತ್ಯುನ್ನತ ಮಟ್ಟಕ್ಕೆ ಏರಿಸಬೇಕು, ವಿಭಿನ್ನವಾಗಿಸಬೇಕು ಅನ್ನುವ ಕಡೆ ಇರಬೇಕು. ಅದಕ್ಕೆ ನಮ್ಮ ಕನ್ನಡದ ಮಹಾನ್ ಕವಿಗಳು, ಲೇಖಕರು, ಸಾಹಿತಿಗಳು, ಜನಪ್ರತಿನಿಧಿಗಳು, ಎಲ್ಲರಿಗಿಂತ ಹೆಚ್ಚಾಗಿ ನಾವುಗಳು (ಕನ್ನಡಿಗರು) ಅತ್ತಕಡೆ ಒಂದು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ.

ಈ ಪಥದಲ್ಲಿ ಸಾಗುವದಕ್ಕೆ ನಮ್ಮ ನಮ್ಮಲ್ಲೆ ಒಂದು ರೂಪುರೇಷೆ ಹಾಕಿಕೊಂಡು, ಅದನ್ನು ಸರ್ಕಾರ ಅಥವಾ ಸಂವಿಧಾನದ ಸಹಕಾರದಿಂದ ಕಾರ್ಯರೂಪಕ್ಕೆ ತಂದರೆ, ಶಾಸ್ತ್ರೀಯಮಾನಕ್ಕಿಂತ ಮಿಗಿಲಾದ ಪ್ರಶಸ್ತಿಗಳು, ಹೆಸರು ನಮ್ಮ ನಾಡು, ನುಡಿ, ಜನತೆ ಯನ್ನು ಅಲಂಕರಿಸುವುದರಲ್ಲಿ ಸಂದೇಹವಿಲ್ಲ.

ನಮ್ಮ ಭಾಷೆ, ನಡು, ನುಡಿ, ಜನ ಅದರ ಸೊಗಡು, ವೈಶಿಷ್ಟ್ಯ, ಮೌಲ್ಯಗಳು, ಸೌಂದರ್ಯ, ಇತಿಹಾಸ, ಪರಂಪರೆ ಪ್ರತಿಯೊಬ್ಬ ಜನರ ನಾಲಗೆಯ ತುದಿಯಲ್ಲಿ ಮತ್ತು ಹೃದಯದಲ್ಲಿ ಇರಬೇಕೆ ಹೊರತು ಯವುದೋ ಸರ್ಕಾರಿ ಕಡೆತಗಳಲ್ಲಿ ಅಲ್ಲ!!

ಕನ್ನಡಿಗರಾದ ನಾವು ಶಾಂತಿ ಪ್ರೀಯರು, ಸಹೃದಯಿಗಳು, ವಿಶಾಲ ಮನೋಭಾವದವರು ಅಂತೆಲ್ಲಾ ಇಡೀ ಅಖಂಡ ಭಾರತದಲ್ಲಿ ಹೆಸರುವಾಸಿ, ನಮ್ಮ ಈ ವಿಭಿನ್ನವಾದ ಪ್ರಯತ್ನದಿಂದ ಈ ನಮ್ಮ ಗುರುತು ಭಾರತದ ಮುಂದಿನ ಪೀಳಿಗೆಯಲ್ಲಿ ಇಮ್ಮಡಿ ಆಗುತ್ತದೆ ಹೊರತು ಕಮ್ಮಿ ಅಗುವುದಿಲ್ಲ.

ಇದು ನಮ್ಮಿಂದ ಸಾಧ್ಯವೆ? ಹೌದು ಸಂಘಟನೆಯಿಂದ ಮಾತ್ರ...!! "ಒಗ್ಗಟ್ಟಿನಲ್ಲಿ ಬಲವಿದೆ" !!

ಜೈ ಕರ್ನಾಟಕ ಮಾತೆ, ಜೈ ಭಾರತಾಂಬೆ!!

No comments: