ನಮಸ್ಕಾರ...!

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು!!!


ರಚನೆ: ಹುಯಿಗೋಳ ನಾರಾಯಣ ರಾವ್, ಸಂಗೀತ: ಪಿ. ಕಾಳಿಂಗ ರಾವ್

ಈ ತಾಣದಲ್ಲಿ ತಮಗೆ,

ಕನ್ನಡದ ಮೇರು ಕೃತಿಗಳ ಆಯ್ದ ಕೆಲವು ಭಾಗಗಳು, ಕನ್ನಡ ನಾಡು, ನುಡಿ, ಜಲ,ಪರಿಸರ ಸೊಬಗು ಇತ್ಯಾದಿಗಳ ವಿಶ್ಲೇಷಣೆ, ಕನ್ನಡ ಜನ, ಭಾಷೆ, ಸಂಸ್ಕೃತಿ,ಸಾಹಿತ್ಯ,ಸಂಗೀತ,ಪರಂಪರೆಗಳ ಕಿರು ಪರಿಚಯಗಳು,
ಭೌತಿಕ, ಆಧ್ಯಾತ್ಮಿಕ ವಿಷಯಗಳು


ಸವಿಯಲು ದೊರೈಯುತ್ತದೆ !!!

..ಜೊತೆಗೆ ನನ್ನ ಕೆಲವು ವಯಕ್ತೀಕ ಅಭಿಪ್ರಾಯಗಳು!!


ಸಿರಿಗನ್ನಡಂ ಗೆಳ್ಗೆ ಸಿರಿಗನ್ನಡಂ ಬಾಳ್ಗೆ!!

Thursday 2 July 2009

ಆಧ್ಯಾತ್ಮಿಕ ಮತ್ತು ತಕ್ಕಡಿ

ಜೀವಿಯ ಆಧ್ಯಾತ್ಮಿಕ ಜೀವನ ಒಂದು ತಕ್ಕಡಿಯಂತೆ. ಯಾವ ರೀತಿ ತಕ್ಕಡಿಯು ಭಾರವಾದ ಕಡೆಗೆ ತೂಗುತ್ತದೆಯೋ, ಅದೇ ರೀತಿ ಯಾವ ಮನುಷ್ಯನು ಪ್ರಾಪಂಚಿಕ ಸುಖ ಮತ್ತು ಭೋಗಗಳನ್ನು ಬಯಸಿತ್ತಾನೋ ಅವನು ಭೂಮಿಯ ಕಡೆಗೆ ತೂಗುತ್ತಾನೆ. ಅವನು ಮತ್ತೆ ಇದೇ "ಪುನರಪಿ ಜನನಮ್ ಪುನರಪಿ ಮರಣಂ" ಎಂಬ ಕಾಲಚಕ್ರದಲ್ಲಿ ಸಿಕ್ಕಿ ಬೀಳುತ್ತಾನೆ.

ಯಾವ ಜೀವಿಯು ಪ್ರಪಂಚದ ಸುಖ ಮತ್ತು ಭೋಗಗಳಿಗೆ ಮಾರು ಹೋಗದೆ ಇರುತ್ತಾನೋ, ಅವನು ಭೂಮಿಯ ಕಡೆಗೆ ತೂಗದೆ, ಪರಮಾತ್ಮನ ಸನ್ನಿಧಿಯನ್ನು ಸೇರುತ್ತಾನೆ. ಅವನಿಗೆ ಈ ಕಾಲಚಕ್ರದ ಭಯವಿರುವುದಿಲ್ಲ. ಅವನು ಮುಕ್ತಿಯನ್ನು ಹೊಂದುತ್ತಾನೆ. ಅವನು ಮುಕ್ತ ಜೀವಿ!!!.

- ರಾಮಕೃಷ್ಣ ಪರಮಹಂಸರು

Saturday 3 January 2009

ಡಂಭಾಚರ ಮತ್ತು ಸದ್ಭಕ್ತಿ

ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ,
ನೀಡಿ ನೀಡಿ ಕೆಟ್ಟರು ನಿಜವಲ್ಲದೆ
ಮಾಡುವ ನೀಡುವ ಗುಣವುಳ್ಳವರ್‍ಏ ಕೂಡಿಕೊಂಬ ನಮ್ಮ ಕೂಡಲ ಸಂಗಮದೇವ ||

-ಬಸವಣ್ಣ

ತಾತ್ಪರ್ಯ: ಈ ಪ್ರಪಂಚದಲ್ಲಿ ಡಾಂಭಿಕ ತನದಿಂದ ಪರಿಶುದ್ಧ ಮನಸಿಲ್ಲದೆ, ಯಾವುದೋ ಆಮಿಷಕ್ಕೆ ಒಳಗಾಗಿ, ದಾನ ಶೂರ ನೆನಿಸಿಕೊಳ್ಳುವುದಕ್ಕೋಸ್ಕರ ದಾನ, ಧರ್ಮ ಮಾಡಿ, ಬರಿ ತೊರುವಿಕೆಗಾಗಿ ಭಕ್ತಿ, ವಿಶ್ವಾಸ, ನಂಬಿಕೆಗಳ ನಟನೆ ಮಾಡಿ ಹಣ ಮತ್ತು ಸಮಯ ವ್ಯರ್ಥ ಮಾಡುತ್ತಾ ಕೆಟ್ಟು ಹೋದರೇ ವಿನಹ ಅವರಿಗೆ ಎಂದಿಗೂ ನಿಜವಾದ ಭಗವಂತನ ಕೃಪೆ ದೊರೆಯುವುದಿಲ್ಲ. ಯಾವ ಜೀವಿಯು ಯಾವುದೇ ಫಲದ ನಿರೀಕ್ಷೆಗಳಿಲ್ಲದೆ ಮನಃ ಪೂರ್ವಕವಾಗಿ ದಾನ, ಧರ್ಮ, ಭಕ್ತಿ, ಕರ್ಮಗಳನ್ನು ಶ್ರದ್ಧೆ ವಹಿಸಿ ಮಾಡುತ್ತಾನೊ, ಅಂತವರಿಗೆ ನಮ್ಮ ಕೂಡಲ ಸಂಗಮದೇವ ಒಲಿಯುತ್ತಾನೆ ಮತ್ತು ಅಂತಹ ಸತ್-ಭಕ್ತರನ್ನು ಸದಾ ಕೈ ಹಿಡಿದು ಕಾಪಾಡುತ್ತಾನೆ.

ಯಾವುದು ಹೊಸತು ?

ಹಳೆ ಸೂರ್ಯ ಹಳೆ ಚಂದ್ರ ಹಳೆ ಭೂಮಿ ಹಳೆ ನೀರು |
ಹಳೆ ಹಿಮಾಚಲ ಗಂಗೆ ಹಳೆ ವಂಶ ಚರಿತೆ||
ಹಳೆಯವಿವು ನೀನಿದರೊಳಾವುದನು ಕಳೆದೀಯೋ ? |
ಹಳದು ಹೊಸತರೊಳಿರದೆ ? - ಮಂಕುತಿಮ್ಮ
-ಡಿ.ವಿ.ಜಿ

ತಾತ್ಪರ್ಯ: ನಮಗೆ ಹೊಸದಾಗಿರುವುದು ಯಾವುದು, ಅಂಥ ಹಳೆಯದಾದದ್ದು ಯಾವುದನ್ನು ನಾವು ತೆಗೆದು ಹಾಕಲಾಗುತ್ತದೆ ? ನಾವು ನೋಡಿತ್ತಿರುವ ಸೂರ್ಯ, ಚಂದ್ರ, ಭೂಮಿ, ನೀರು, ಹಿಮಾಚಲ ಗಂಗೆ, ಎಲ್ಲವೂ ಹಳೆಯವೆ. ನಮ್ಮ ಮಾನವ ವಂಶವು ಹಳೆಯದೆ. ನಾವು ಬರುವ ಮೊದಲೂ ಇವು ಇತ್ತು, ನಾವು ಹೋದಮೇಲು ಇವು ಇರುತ್ತವೆ. ಹೀಗಾಗಿ ಇವೆಲ್ಲವು ನಾವು ಈಗ ಹೊಸದೆಂದು ಯಾವುದನ್ನು ಕರೆಯುತ್ತೇವೆಯೊ ಅದರಲ್ಲಿ ಇಲ್ಲವೇನು ?

ಬೀchi

ಪೂರ್ಣ ನಾಮಧೇಯ: ರಾಯಸಂ ಭೀಮಸೇನ್ ರಾವ್

ಕಾವ್ಯನಾಮ: ಬೀchi(ಇಂಗ್ಲೀಷ್ ಮತ್ತು ಕನ್ನಡ ಬೆರೆತ ಕಾವ್ಯನಾಮ)

ಜನನ: ೨೩ - ೦೪ - ೧೯೧೩

ಜನನ ಸ್ಥಳ: ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ

ತಂದೆ, ತಾಯಿ: ತಂದೆ ರಾಯಸದ ಶ್ರೀನಿವಾಸರಾವ್, ತಾಯಿ ಭಾರತಮ್ಮ.

ವ್ಯಾಸಂಗ: ೧೯೩೦ರಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಹರಪ್ಪನಹಳ್ಳಿಯಲ್ಲಿ.

ಸೇವೆ ಸಲ್ಲಿಸಿದ ಕ್ಷೇತ್ರಗಳು: ಹೈಸ್ಕೂಲ್ ವಿದ್ಯಾಭಾಸದ ನಂತರ ಹುಬ್ಬಳ್ಳಿಯ ವಿಮಾ ಕಚೇರಿಯಲ್ಲಿ ಕೆಲಸ ಮಾಡಿದರು.

- ೧೯೩೬ ರಲ್ಲಿ ಪೋಲೀಸ್ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರು. ೧೯೬೮ ರಲ್ಲಿ ನಿವೃತ್ತರಾಗಿ ಪಡೆದ ಪಿಂಚಣಿ ಹಣ ೧೩೩ ರೂಗಳು.

ಸಾಹಿತ್ಯ ಕ್ಷೇತ್ರದ ಕೊಡುಗೆ:

- ಹರೆಟೆಗಳು, ಹಾಸ್ಯ ಲೇಖನಗಳು, ಕಾದಂಬರಿಕಾರ, ನಾಟಕಕಾರ

ಹಾಸ್ಯ ಲೇಖನ: ಗೆಳೆಯ ಕೋ.ಚೆನ್ನಬಸಪ್ಪನವರು ನಡೆಸುತ್ತಿದ್ದ "ರೈತವಾಣಿ" ಪತ್ರಿಕೆಗೆ "ಬೇವಿನ ಕಟ್ಟೆ ತಿಂಮ" ಎಂಬ ಸ್ಥಿರ ಶೀರ್ಷಿಕೆಯಡಿ ಹಾಸ್ಯ ಲೇಖನಗಳನ್ನು ಬರೆದರು.

ಹರಟೆಗಳು: ಪಾಟೀಲ ಪುಟ್ಟಪ್ಪ ಅವರ ವಿಶಾಲ ಕರ್ನಾಟಕಕ್ಕೆ "ಕೆನೆಮೊಸರು" ಸ್ಥಿರ ಶೀರ್ಷಿಕೆಯಡಿ ನಿತ್ಯವೂ ಹರಟೆಗಳನ್ನು ಬರೆದರು.

ನಾಟಕಗಳು: "ದೇವರ ಅತ್ಮಹತ್ಯೆ" ನಾಟಕ ರಚಿಸಿ ತಾವೆ ದೇವರ ಪಾತ್ರ ಕೂಡವಹಿಸಿದರು. ೧೯೪೬ ರಿಂದ ಪ್ರಾರಂಭವಾದ "ರೇಡಿಯೊ ನಾಟಕ" ಗಳಿಂದ ಹಿಡಿದು ತಾವು ಜೀವಿಸಿದ್ದಷ್ಟು ಕಾಲ ಇವರ ಲೇಖನಿಗಳಿಗೆ ವಿಶ್ರಾಂತಿಯೆ ಇರಲಿಲ್ಲ. "ಹನ್ನೊಂದನೆಯ ಅವತಾರ", "ಏಕೀಕರಣ", ಏಕೋದರರು" ಎಂಬ ರೇಡಿಯೊ ನಾಟಕಗಳು ಇವರಿಗೆ ಬಹಳ ಕೀರ್ತಿಗಳನ್ನು ತಂದು ಕೊಟ್ಟಿತು.

ನಗೆ ಬರಹಗಳು: ಇವರು ತಮ್ಮ ಲೇಖನಗಳಿಗೆ "ತಿಂಮ" ಪಾತ್ರ ಸೃಷ್ಠಿಸಿದರು. "ತಿಂಮನ ತಲೆ, ತಿಂಮನ ರಸಾಯನ, ಬೆಳ್ಳಿ ತಿಂಮ ನೂರೆಂಟು ಹೇಳಿದ" ಹೀಗೆ ತಿಂಮನ ಹೆಸರನಿಲ್ಲಿ ನೂರಾರು ನಗೆಬರಹಗಳನ್ನು ಬರೆದರು. ಇವರ ಪ್ರಕಾರ
"ತಿಂಮನ ನಗು ದೇಹವಾದರೆ, ನಗುವಿನ ಹಿಂದೆ ಇರುವ ನೋವು ಅದರ ಜೀವ. ಇದನ್ನು ಗುರುತಿಸದಿದ್ದರೆ ದೊರೆಯುವುದು ತಿಂಮನ ಹೆಣ ಮಾತ್ರ"

ಕಾದಂಬರಿ: "ದಾಸ ಕೂಟ" ಮೊದಲ ಕಾದಂಬರಿ. ಹಾಸ್ಯ ಪ್ರಧಾನವಾದ ಕನ್ನಡದ ಮೊದಲ ಕಾದಂಬರಿ ಎಂದೂ ಹೇಳಬಹುದು. ೩೦ ಕಾದಂಬರಿ ಮತ್ತು ೬೦ ಕ್ಕಿಂತ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. "ಸತ್ತವನು ಎದ್ದು ಬಂದಾಗ" ಎನ್ನುವ ಪತ್ತೆದಾರಿ ಕಾದಂಬರಿಯನ್ನು ರಚಿಸಿದ್ದಾರೆ.

ಕವನ ಸಂಕಲನ: "ಅಂದನಾ ತಿಂಮ" ಇವರ ಏಕೈಕ ಕವನ ಸಂಕಲನ. ನಗು ಲೇಪನದಿಂದ ಕೂಡಿದ ಈ ಕವನ ಸಂಕಲನದಲ್ಲಿ ಇವರು ಜೀವನದ ಅನುಭವಗಳನ್ನು ಹೇಳುವ ನಾಲ್ಕು ಪದಗಳುವುಳ್ಳದ್ದಾಗಿದೆ.

ವಿದೇಶಿ ಪ್ರವಾಸ: ಇವರು ರಷ್ಯಾ ದೇಶದಲ್ಲಿ ಪ್ರವಾಸ ಮಾಡಿ, ಪ್ರವಾಸದ ಅನುಭವಗಳನ್ನು "ದೇವರಿಲ್ಲದ ಗುಡಿ" ಎನ್ನುವ ಕೃತಿಯಲ್ಲಿ ರಚಿಸಿದ್ದಾರೆ.

ಸುಧಾ ವಾರಪತ್ರಿಕೆಯಲ್ಲಿ ಇವರು ಓದುಗರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಿತ್ತಿದ್ದರಲ್ಲದೆ ಅದನ್ನು "ಉತ್ತರ ಭೂಪ" ಎಂಬ ಕವನ ಸಂಕಲನದಲ್ಲಿ ರಚಿಸಿದ್ದಾರೆ.

ಆತ್ಮ ಚರಿತೆ: "ನನ್ನ ಭಯಾಗ್ರಫಿ" ಎಂಬ ಎಲ್ಲರನ್ನು ಬೆಚ್ಚಿ ಬೀಳಿಸುವ ಆತ್ಮ ಚರಿತೆಯನ್ನು ಬರೆದಿದ್ದಾರೆ.

ಪ್ರಶಸ್ತಿಗಳು ಮತ್ತು ಪುರಸ್ಕಾರಗಳು:

೧. "ತಿಂಮನ ತಲೆ" - ಮದ್ರ್‍ಆಸ್ ಸರ್ಕಾರದಿಂದ ರಾಜ್ಯ ಮಟ್ಟದ ಬಹುಮಾನ.
೨. "ಚಿನ್ನದ ಕಸ" ಕೃತಿಗೆ - ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ

ಜೀವನ ವಿಶೇಷ: ಕನ್ನಡ ಎಂದರೆ ಮೊದಲು ಇವರಿಗೆ ಕೊಂಚವೂ ಅಭಿಮಾನ ಇರಲಿಲ್ಲ. ಒಂದು ಬಗೆಯ ಅಸಡ್ಡೆ ತೊರುತ್ತಿದ್ದರು. ಇವರ ಶ್ರೀಮತಿಯವರಿಗೆ ಒದಲು ಕನ್ನಡ ಪುಸ್ತಕಗಳನ್ನು ತಂದುಕೊಡುವ ಪ್ರಸಂಗ ಬಂದಾಗ ಇವರಿಗೆ ದೊರೆತದ್ದು "ಸಂಧ್ಯಾರಾಗ" ಕಾದಂಬರಿ. ಈ ಕಾದಂಬರಿಯನ್ನು ಓದಿ ಸ್ವತಃ ತಾವೇ ಕನ್ನಡ ಪ್ರೇಮಿಯಾದರು.

ದೈವಾಧೀನ: ಇವರು ೦೭ - ೧೨ - ೧೯೮೦ ರಂದು ದೈವಾಧೀನರಾದರು.

ರೋಗ ಬರುವುದೆಂದು...!

ಬಂದೀತು ರೋಗವೆಂದೆಂದು | ನರಳಲು ಬೇಡ
ಬಂದುದನುಂಡು ಸುಖಿಯಾಗು - ರೋಗ ಬಂ
ದಂದಿಗೇ ನರಳು ಸರ್ವಙ
- ಸರ್ವಙ

ತಾತ್ಪರ್ಯ: ರೋಗಬಾರದೆಯೇ, ಬಂದೀತೆಂಬ ನಿರೀಕ್ಷೆಯಿಂದಲೇ ನರಳುವುದು ಬೇಡ. ಇದ್ದುದನುಂಡು ನೆಮ್ಮದಿಯಿಂದ ಇರುವುದು ಲೇಸು. ರೋಗ ಬಂದಾಗ ನರಳುವುದು ಇದ್ದೇ ಇದೆ.

Sunday 28 December 2008

ಹುಟ್ಟು.. ಸಾವು..!

ಪುನರಪಿ ಜನನಂ ಪುನರಪಿ ಮರಣಂ
ಪುನರಪಿ ಜನನೀ ಜಠರೇ ಶಯನಮ್
ಇಹಸಂಸಾರೇ ಬಹುದುಸ್ತಾರೇ
ಕೃಪಯಾಪರೇ ಪಾಹಿ ಮುರಾರೇ ||

- ಆನಂದಗಿರಿ (ಶಂಕರ ಭಗವತ್ಪಾದರ ಶಿಷ್ಯರು)

ತಾತ್ಪರ್ಯ: ಹುಟ್ಟು, ಸಾವು ಇವು ಒಂದರ ಹಿಂದೊಂದು ಬರುತ್ತಲೇ ಇರುತ್ತದೆ. ಹುಟ್ಟಿದವನು ಸಾಯಲೇಬೇಕು. ಸತ್ತವನು ಮತ್ತೊಮ್ಮೆ ಹುಟ್ಟುತ್ತಾನೆ. ಹೀಗೆ ತಾಯ ಗರ್ಭದಲ್ಲಿ ನಾವು ಮತ್ತೆ ಮತ್ತೆ ಹುಟ್ಟಿ ಆಶ್ರಯಿಸಿ, ಆನೇಕ ದುಃಖಗಳನ್ನು ಅನುಭವಿಸಬೇಕಾಗುತ್ತದೆ. ಈ ದುಸ್ತಾರವಾದ ಸಂಸಾರ ದುಃಖವನ್ನು ಬಗೆಹರಿಸಬೇಕಾದರೆ ಇರುವ ಒಂದೇ ಮಾರ್ಗ ಎಂದರೆ ಭಗವಂತನ ಕೃಪೆ. ಆದುದರಿಂದ "ಹೇ ಮುರಾರಿ! " ನನ್ನನ್ನು ಸಲಹು ಎಂದು ಆನಂದಗಿರಿಯವರು ಇಲ್ಲಿ ಬೇಡುತ್ತಾರೆ.

ದುರ್ಜನರ ಸಹವಾಸ ...!

ಸಾರ ಸಜ್ಜನ ಸಂಗವ ಮಾಡುವುದು, ದೂರ ದುರ್ಜನರ ಸಂಗ ಬೇಡವಯ್ಯ.
ಆವ ಹಾವಾದರೇನು ? ವಿಶವೊಂದೇ, ಅಂತವರ ಸಂಗ ಬೇಡವಯ್ಯ,
ಅಂತರಂಗ ಶುದ್ದವಲ್ಲದವರ ಸಂಗ ಸಿಂಗಿ, ಕಾಳಕೂಟ ವಿಷವೋ, ಕೂಡಲ ಸಂಗಮದೇವಾ ||

- ಬಸವಣ್ಣ

ತಾತ್ಪರ್ಯ: ಒಳ್ಳೆಯ ಜನರ ಸಂಪರ್ಕವನ್ನು ಮಾಡುವುದು ಸತ್ವ ಪೂರ್ಣವಾಗಿದೆ. ದುಷ್ಟ ಜನರ ಸಂಪರ್ಕವನ್ನು ಮಾಡಬಾರದು. ಅವರಿಂದ ದೂರವಿರಬೇಕು. ಯಾವ ಪ್ರಕಾರದ ಸರ್ಪವಾದರೇನು ? ಕಚ್ಚಿದರೆ ವಿಷವು ಒಂದೇ ಆಗಿರುತ್ತದೆ. ಅಂತಹ ವಿಷಯುಕ್ತ ಜನರ ಸಂಪರ್ಕವೇ ಬೇಡ. ಕೂಡಲ ಸಂಗಮದೇವರ ಅಂತರಂಗವಿಲ್ಲದವರ ಗೆಳೆತನವು "ಸಿಂಗಿ" ಎಂಬ ಒಂದು ಬಗೆಯ ಘೋರ ವಿಷವಾಗಿದೆ.