ನಮಸ್ಕಾರ...!

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು!!!


ರಚನೆ: ಹುಯಿಗೋಳ ನಾರಾಯಣ ರಾವ್, ಸಂಗೀತ: ಪಿ. ಕಾಳಿಂಗ ರಾವ್

ಈ ತಾಣದಲ್ಲಿ ತಮಗೆ,

ಕನ್ನಡದ ಮೇರು ಕೃತಿಗಳ ಆಯ್ದ ಕೆಲವು ಭಾಗಗಳು, ಕನ್ನಡ ನಾಡು, ನುಡಿ, ಜಲ,ಪರಿಸರ ಸೊಬಗು ಇತ್ಯಾದಿಗಳ ವಿಶ್ಲೇಷಣೆ, ಕನ್ನಡ ಜನ, ಭಾಷೆ, ಸಂಸ್ಕೃತಿ,ಸಾಹಿತ್ಯ,ಸಂಗೀತ,ಪರಂಪರೆಗಳ ಕಿರು ಪರಿಚಯಗಳು,
ಭೌತಿಕ, ಆಧ್ಯಾತ್ಮಿಕ ವಿಷಯಗಳು


ಸವಿಯಲು ದೊರೈಯುತ್ತದೆ !!!

..ಜೊತೆಗೆ ನನ್ನ ಕೆಲವು ವಯಕ್ತೀಕ ಅಭಿಪ್ರಾಯಗಳು!!


ಸಿರಿಗನ್ನಡಂ ಗೆಳ್ಗೆ ಸಿರಿಗನ್ನಡಂ ಬಾಳ್ಗೆ!!

Wednesday 24 September 2008

ವಿಷ್ಣುಸಹಸ್ರನಾಮ ವೈಶಿಷ್ಟ್ಯ

ಆಚಾರ್ಯಮಧ್ವರು ಈ ಅಪೂರ್ವವಾದ ಸ್ತೋತ್ರದ ವೈಶಿಷ್ಟ್ಯಕ್ಕೆ ನಾಲಕ್ಕು ಕಾರಣಗಳನ್ನು ಬೆಳಕಿಗೆ ತಂದರು

೧. ವಿಷ್ಣುಸಹಸ್ರನಾಮ ಸ್ತೋತ್ರ ಸರ್ವಶಾಸ್ತ್ರಗಳ ಸಾರ
೨. ಒಂದೊಂದು ನಾಮಕ್ಕು ನೂರು ಅರ್ಥಗಳು
೩. ಭಗವಂತನ ಸಾವಿರರೂಪಗಳ ನಾಮ
೪. ಸಾವಿರ ನಾಮಗಳು ಬ್ರುಹತೀಸಹಸ್ರದ ಸಾರ.

ಈ ಸ್ತೋತ್ರವನ್ನು ಭಕ್ತಿಯಿಂದ ಪಠಿಸಿದಾಗ ಈ ನಾಮಗಳ ನಾದತರಂಗದಿಂದ ರೋಗ ಪರಿಹಾರವಾಗುತ್ತದೆ ಎಂಬುದಕ್ಕೆ ಹಲವಾರು ಘಟನೆಗಳುಂಟು.

"ರೋಗಾರ್ತೋ ಮುಚ್ಯತೇ ರೋಗಾತ್...."

ವಿಷ್ಣುವಿನ ಸಹಸ್ರನಾಮಸ್ತೋತ್ರಗಳೆ ಹಲವಾರು ಪುರಾಣಗಳಲ್ಲಿ ಬಂದಿವೆ. ಆದರೆ ಅವೆಲ್ಲವುಗಳಕಿಂತ ಹೆಚ್ಚು ಪ್ರಸಿದ್ಧವಾದದ್ದು, ಸರ್ವರ ಮನ್ನಣೆಗೆ ಪಾತ್ರವಾದದ್ದು ಮಹಾಭಾರತದಲ್ಲಿ ಬಂದ ವಿಷ್ಣುವಿನಸಹಸ್ರನಾಮಸ್ತೋತ್ರ

ಇದಕ್ಕೆ ಆಚಾರ್ಯಶಂಕರರದ್ದೆನ್ನಲಾದ ಭಾಷ್ಯವೊಂದು ಉಪಲಬ್ಧವಿದೆ. ಅದು ಶಂಕರರದ್ದೆ ಹೌದೇ ಅಲ್ಲವೆ ಎನ್ನುವಲ್ಲಿ ವಿಮರ್ಶಕರಲ್ಲಿ ಅಭಿಪ್ರಾಯ ಭೇದವಿದೆ.

ವಿಷ್ಣುವಿನಸಹಸ್ರನಾಮಸ್ತೋತ್ರ ಆಧ್ಯಾತ್ಮಿಕ ಮಹತ್ವವನ್ನು ಮೊದಲು ಬೆಳಕಿಗೆ ತಂದವರೇ ಆಚಾರ್ಯಮಧ್ವರು. ಮಾಧ್ವಪರಂಪರೆಯಲ್ಲಿ ವಿಷ್ಣುವಿನಸಹಸ್ರನಾಮಸ್ತೋತ್ರಕ್ಕೆ ಮೊದಲು ವ್ಯಾಖ್ಯಾನ ಬರೆದವರು ಶ್ರೀವಾದಿರಾಜರು.

No comments: