ಮನುಷ್ಯನಿಗೆ ಒಳ್ಳೆಯ ಗುಣಗಳು ಮತ್ತು ಮೌಲ್ಯಗಳಿರಬೇಕು ಎಂದು ನಮ್ಮ ಹಿಂದೂ ಶಾಸ್ತ್ರ ಮತ್ತು ಪುರಾಣಗಳಲ್ಲಿ ಹೇಳಿವೆ ಮತ್ತು ಆ ಗುಣಗಳು ಮತ್ತು ಮೌಲ್ಯಗಳನ್ನು ಮಹಭಾರತದ ಮೂಲಕ ನಮಗೆ ತಿಳಿಯಲು ಒಳ್ಳೆ ಅವಕಾಶವು ಇದೆ.
ಒಬ್ಬ ಮನುಷ್ಯನಿಗೆ ಇರಬೇಕಾದ ೧೬ ಗುಣಗಳು.
೧. ಧರ್ಮ ೨. ಭಕ್ತಿ ೩. ಙ್ನಾನ ೪. ವೈರಾಗ್ಯ ೫. ಪ್ರಙ್ನಾ ೬. ಮೇಧಾ ೭. ಧೃತಿ ೮. ಸ್ಥಿತಿ
೯. ಯೋಗ ೧೦. ಪ್ರಾಣ ೧೧. ಬಲ ೧೨. ಶ್ರವಣ ೧೩. ಮನನ ೧೪. ನಿದಿಧ್ಯಾಸನ ೧೫. ಶೀಲ ೧೬. ವಿನಯ
೧೮ ಮೌಲ್ಯಗಳು:
ಮೇಲೆ ತಿಳಿಸಿರುವ ೧೬ ಗುಣಗಳು ಮತ್ತು
೧೭. ವೇದವಿದ್ಯೆ ಮತ್ತು ಅದರ ಮೂಲಕ
೧೮. ವೇದವೇದ್ಯನಾದ ಭಗವಂತ
ಈ ೧೮ ಮೌಲ್ಯಗಳನ್ನು ಮಹಾಭಾರತದ ೭ ಪಾತ್ರಗಳು ಪ್ರತಿನಿಧಿಸುತ್ತವೆ.
೧. ಧರ್ಮರಾಜ - ಧರ್ಮ
೨. ಭೀಮಸೇನ - ಭಕ್ತಿ, ಙ್ನಾನ, ವೈರಾಗ್ಯ, ಪ್ರಙ್ನಾ, ಮೇಧಾ, ಧೃತಿ, ಸ್ಥಿತಿ, ಯೋಗ, ಪ್ರಾಣ ಮತ್ತು ಬಲ.
೩. ಅರ್ಜುನ - ಶ್ರವಣ, ಮನನ ಮತ್ತು ಧ್ಯಾನ
೪.೫. ನಕುಲ-ಸಹದೇವ - ಶೀಲ ಮತ್ತು ವಿನಯ
೬. ದ್ರೌಪದಿ - ವೇದವಿದ್ಯೆ
೭. ಶ್ರೀಕೃಷ್ಣ - ವೇದವೇದ್ಯ
ಹೀಗೆ ಮಹಾಭಾರತದ ಪ್ರತಿಯೊಂದು ಶ್ಲೋಕ, ಪ್ರತಿಯೊಂದು ಪದ, ಪ್ರತಿಯೊಂದು ಅಕ್ಶರ ಎಲ್ಲಕಿಂತ ಎತ್ತರದಲ್ಲಿರುವ ೧೮ನೆಯವನಾದ ಭಗವಂತನನ್ನು ಅಂದರೆ ಸಾಕ್ಷಾತ್ ಶ್ರೀಕೃಷ್ಣನನ್ನು ಸಾರುತ್ತದೆ.
ನಮಸ್ಕಾರ...!
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು!!!
ರಚನೆ: ಹುಯಿಗೋಳ ನಾರಾಯಣ ರಾವ್, ಸಂಗೀತ: ಪಿ. ಕಾಳಿಂಗ ರಾವ್
ಈ ತಾಣದಲ್ಲಿ ತಮಗೆ,
ಕನ್ನಡದ ಮೇರು ಕೃತಿಗಳ ಆಯ್ದ ಕೆಲವು ಭಾಗಗಳು, ಕನ್ನಡ ನಾಡು, ನುಡಿ, ಜಲ,ಪರಿಸರ ಸೊಬಗು ಇತ್ಯಾದಿಗಳ ವಿಶ್ಲೇಷಣೆ, ಕನ್ನಡ ಜನ, ಭಾಷೆ, ಸಂಸ್ಕೃತಿ,ಸಾಹಿತ್ಯ,ಸಂಗೀತ,ಪರಂಪರೆಗಳ ಕಿರು ಪರಿಚಯಗಳು,
ಭೌತಿಕ, ಆಧ್ಯಾತ್ಮಿಕ ವಿಷಯಗಳು
ಸವಿಯಲು ದೊರೈಯುತ್ತದೆ !!!
..ಜೊತೆಗೆ ನನ್ನ ಕೆಲವು ವಯಕ್ತೀಕ ಅಭಿಪ್ರಾಯಗಳು!!
ಸಿರಿಗನ್ನಡಂ ಗೆಳ್ಗೆ ಸಿರಿಗನ್ನಡಂ ಬಾಳ್ಗೆ!!
Subscribe to:
Post Comments (Atom)
No comments:
Post a Comment