ನಮಸ್ಕಾರ...!

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು!!!


ರಚನೆ: ಹುಯಿಗೋಳ ನಾರಾಯಣ ರಾವ್, ಸಂಗೀತ: ಪಿ. ಕಾಳಿಂಗ ರಾವ್

ಈ ತಾಣದಲ್ಲಿ ತಮಗೆ,

ಕನ್ನಡದ ಮೇರು ಕೃತಿಗಳ ಆಯ್ದ ಕೆಲವು ಭಾಗಗಳು, ಕನ್ನಡ ನಾಡು, ನುಡಿ, ಜಲ,ಪರಿಸರ ಸೊಬಗು ಇತ್ಯಾದಿಗಳ ವಿಶ್ಲೇಷಣೆ, ಕನ್ನಡ ಜನ, ಭಾಷೆ, ಸಂಸ್ಕೃತಿ,ಸಾಹಿತ್ಯ,ಸಂಗೀತ,ಪರಂಪರೆಗಳ ಕಿರು ಪರಿಚಯಗಳು,
ಭೌತಿಕ, ಆಧ್ಯಾತ್ಮಿಕ ವಿಷಯಗಳು


ಸವಿಯಲು ದೊರೈಯುತ್ತದೆ !!!

..ಜೊತೆಗೆ ನನ್ನ ಕೆಲವು ವಯಕ್ತೀಕ ಅಭಿಪ್ರಾಯಗಳು!!


ಸಿರಿಗನ್ನಡಂ ಗೆಳ್ಗೆ ಸಿರಿಗನ್ನಡಂ ಬಾಳ್ಗೆ!!

Thursday, 27 November 2008

ತಂದೆ ಮತ್ತು ಗುರು...!

ತಂದೆಗೂ ಗುರುವಿಗೂ | ಒಂದು ಅಂತರ ಉಂಟು
ತಂದೆ ತೋರುವನು ಶ್ರೀಗುರುವ - ಗುರುರಾಯ ಬಂಧನವ ಕಳೆವ ಸರ್ವಙ ||

-ಸರ್ವಙ

ತಾತ್ಪರ್ಯ: ಮಾನವನ ಬದುಕಿನಲ್ಲಿ ತಾಯಿ-ತಂದೆ-ಗುರು ಈ ಮೂವರು ಬಹು ಮುಖ್ಯ ಪಾತ್ರಗಳು. ತಾಯಿ ಜನ್ಮಧಾತ್ರಿಯಾದರೆ, ತಂದೆ ಪೋಷಕ ಪಾತ್ರವಹಿಸುತ್ತಾರೆ. ಇನ್ನು ಗುರುವಿನ ಪಾತ್ರ ಅತಿ ಮುಖ್ಯವಾದುದು. ತಂದೆ ಮತ್ತು ಗುರುವಿಗೆ ಇರುವ ವ್ಯತ್ಯಾಸವೆಂದರೆ, ತಂದೆಯು ಮಗುವಿಗೆ ವಿದ್ಯಾಭ್ಯಾಸ ಕೊಡಿಸಲು ಗುರುವನ್ನು ಅರಸಿ ಅವನ ಬಳಿ ಬಿಡುತ್ತಾನೆ. ಗುರುವನ್ನು ತೋರಿಸಿದಾತ ತಂದೆಯಾದರೆ, ಗುರುವು ನಮ್ಮ ಬಂಧವನ್ನೆಲ್ಲಾ ಕಳಚಿ ಹಾಕುತ್ತಾನೆ.

No comments: