ನಮಸ್ಕಾರ...!

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು!!!


ರಚನೆ: ಹುಯಿಗೋಳ ನಾರಾಯಣ ರಾವ್, ಸಂಗೀತ: ಪಿ. ಕಾಳಿಂಗ ರಾವ್

ಈ ತಾಣದಲ್ಲಿ ತಮಗೆ,

ಕನ್ನಡದ ಮೇರು ಕೃತಿಗಳ ಆಯ್ದ ಕೆಲವು ಭಾಗಗಳು, ಕನ್ನಡ ನಾಡು, ನುಡಿ, ಜಲ,ಪರಿಸರ ಸೊಬಗು ಇತ್ಯಾದಿಗಳ ವಿಶ್ಲೇಷಣೆ, ಕನ್ನಡ ಜನ, ಭಾಷೆ, ಸಂಸ್ಕೃತಿ,ಸಾಹಿತ್ಯ,ಸಂಗೀತ,ಪರಂಪರೆಗಳ ಕಿರು ಪರಿಚಯಗಳು,
ಭೌತಿಕ, ಆಧ್ಯಾತ್ಮಿಕ ವಿಷಯಗಳು


ಸವಿಯಲು ದೊರೈಯುತ್ತದೆ !!!

..ಜೊತೆಗೆ ನನ್ನ ಕೆಲವು ವಯಕ್ತೀಕ ಅಭಿಪ್ರಾಯಗಳು!!


ಸಿರಿಗನ್ನಡಂ ಗೆಳ್ಗೆ ಸಿರಿಗನ್ನಡಂ ಬಾಳ್ಗೆ!!

Friday, 28 November 2008

ಗೋವಿಂದಾ ನಮೋ... ಗೋವಿಂದಾ ನಮೋ...!

ಗೋವಿಂದಾ ನಮೋ ಗೋವಿಂದಾ ನಮೋ ಗೋವಿಂದ ನಾರಾಯಣ
ಗೋವರ್ಧನ ಗಿರಿಯನೆತ್ತಿದ, ಗೋವಿಂದ ನಮ್ಮ ರಕ್ಷಿಸ್ಯೆ ||ಪ||

ಮಂಚ ಬಾರದು, ಮಡದಿ ಬಾರಳು ಕಂಚು ಕನ್ನಡಿ ಬಾರದು
ಸಂಚಿತಾರ್ಥದ ದ್ರವ್ಯ ಬಾರದು ಮುಂಚೆ ಮಾಡಿರೋ ಧರ್ಮವ ||೧||

ಅರ್ಥವ್ಯಾರಿಗೆ, ಪುತ್ರರ್‍ಯಾರಿಗೆ ಮಿತ್ರ ಬಾಂಧವರ್‍ಯಾರಿಗೆ
ಕರ್ತೃ ಯಮನನು ಸೆಳೆದು ಒಯ್ವಾಗ ಅರ್ಥಪುತ್ರರು ಬರುವರೆನೋ ||೨||

ತಂದು ಬಂದರೆ ತನ್ನ ಪುರುಷನ ಹಸಿದು ಬಳಲಿದರೆಂಬಳು
ಒಂದು ದಿವಸ ತಾರದಿದ್ದರೆ ಹಂದಿ ನಾಯಿಯಂತೆ ಕೆಲೆವಳು ||೩||

ಪ್ರಾಣದೊಲ್ಲಭೆ ತನ್ನ ಪುರುಷನ ಕಾಣದೆ ನಿಲ್ಲಲಾರಳು
ಪ್ರಾಣ ಹೋಗಲು ಮುಟ್ಟಲಂಜ್ವಳು ಜಾಣೆ ಕರೆದರೂ ಬಾರಳು ||೪||

ಉಂಟು ಕಾಲಕೆ ನೆಂಟರಿಷ್ಟರು ಬಂಟರಾಗಿ ಕಾಯ್ವರು
ಕಂಟಕೆ ಮನೊರು ಬಂದು ಎಳೆವಾಗ ನೆಂಟರಿಷ್ಟರು ಬಾರರು ||೫||

ಒಡವೆ ಅರಸಿಗೆ ಒಡಲು ಅಗ್ನಿಗೆ ಮಡದಿ ಮತ್ತೊಬ್ಬ ಚೆಲುವಗೆ
ಬಡೆದು ಎಳೆದು ಯಮನು ಒಯ್ವಾಗ ಎಡವಿ ಬಿದ್ದಿತು ನಾಲಿಗೆ ||೬||

ದಿಟ್ಟತನದಲಿ ಪಟ್ಟನಾಳಿದ ವೃಷ್ಣಿ ನಂದನ ಚರಣವ
ಮುಟ್ಟಿ ಭಜಿಸಿರೊ ಸಿರಿ ಪುರಂದರ ವಿಠಲೇಶನ ಪಾದವ ||೭||

ಗೋವಿಂದಾ ನಮೋ ಗೋವಿಂದಾ ನಮೋ ಗೋವಿಂದ ನಾರಾಯಣ
ಗೋವರ್ಧನ ಗಿರಿಯನೆತ್ತಿದ, ಗೋವಿಂದ ನಮ್ಮ ರಕ್ಷಿಸ್ಯೆ ||ಪ||

-ಪುರಂದರ ದಾಸರು

No comments: