ನಮಸ್ಕಾರ...!

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು!!!


ರಚನೆ: ಹುಯಿಗೋಳ ನಾರಾಯಣ ರಾವ್, ಸಂಗೀತ: ಪಿ. ಕಾಳಿಂಗ ರಾವ್

ಈ ತಾಣದಲ್ಲಿ ತಮಗೆ,

ಕನ್ನಡದ ಮೇರು ಕೃತಿಗಳ ಆಯ್ದ ಕೆಲವು ಭಾಗಗಳು, ಕನ್ನಡ ನಾಡು, ನುಡಿ, ಜಲ,ಪರಿಸರ ಸೊಬಗು ಇತ್ಯಾದಿಗಳ ವಿಶ್ಲೇಷಣೆ, ಕನ್ನಡ ಜನ, ಭಾಷೆ, ಸಂಸ್ಕೃತಿ,ಸಾಹಿತ್ಯ,ಸಂಗೀತ,ಪರಂಪರೆಗಳ ಕಿರು ಪರಿಚಯಗಳು,
ಭೌತಿಕ, ಆಧ್ಯಾತ್ಮಿಕ ವಿಷಯಗಳು


ಸವಿಯಲು ದೊರೈಯುತ್ತದೆ !!!

..ಜೊತೆಗೆ ನನ್ನ ಕೆಲವು ವಯಕ್ತೀಕ ಅಭಿಪ್ರಾಯಗಳು!!


ಸಿರಿಗನ್ನಡಂ ಗೆಳ್ಗೆ ಸಿರಿಗನ್ನಡಂ ಬಾಳ್ಗೆ!!

Saturday 13 December 2008

ಹೊನ್ನು, ಹೆಣ್ಣು ಮತ್ತು ಕೀರ್ತಿ

ಮನುಷ್ಯನ ಜೀವನದಲ್ಲಿ ಈ ಮೂರು ವಸ್ತುಗಳು ಬಹಳ ಅತ್ಯಮೂಲ್ಯ ಪಾತ್ರವಹಿಸುತ್ತದೆ. ಇವುಗಳನ್ನು ಪಡೆಯಲು ಜೀವನದ ಪ್ರತಿಯೊಂದು ಕ್ಷಣವು ಪರಸಾಹಸವನ್ನೆ ಮಾಡುತ್ತೇವೆ. ಆದರೆ ಯಾವ ಮನುಷ್ಯನು ಈ ಮೂರು ವಸ್ತುಗಳನ್ನು ಪಡೆಯಲು ತನ್ನ ಇಡೀ ಜೀವಮಾನವನ್ನು ಪಣಯಿಟ್ಟು ಅದರ ಬೆನ್ನಟ್ಟಿ ಹೋಗುತ್ತಾನೊ, ಕೊನೆಗೆ ಅವನಲ್ಲಿ ಮನುಷ್ಯನಲ್ಲಿ ಇರಬೇಕಾದ ಗುಣಗಳೇ ಇರದೆ ಬದಲಾಗಿ ನಾನು (ಅಹಂ ಎಂಬ ಭಾವ), ನನ್ನ ಹಣ, ನನ್ನ ಕೀರ್ತಿ ಎಂಬ ತತ್ವಗಳು ಮನೆ ಮಾಡಿರುತ್ತವೆ. ಇಷ್ಟೆ ಅಲ್ಲದೆ ಇವನ ಅಂತ್ಯವಾದೊಡನೆ ಇವನ ಹಣ, ವಸ್ತು, ಭೋಗಗಳನ್ನು ಲಪಟಾಯಿಸಲು ಹಿತೈಷಿಗಳ, ಬಂಧುಗಳ, ಕುಟುಂಬದ ರೂಪದಲ್ಲಿರುವ ಶತ್ರುಗಳು. ಇವರ ನಿಜವಾದ ರೂಪ ಬಯಲಾದ ಮೇಲೆ ಇತನಿಗೆ ತಾನು ಮಾಡಿದ ತಪ್ಪಿನ ಅರಿವಾಗಿ ಅಸಹಾಯಕನಾಗಿ ನೊಂದು, ಬೆಂದು ಸಾಯುತ್ತಾನೆ.

ಬಾಲ್ಯದಲ್ಲಿ ಮಾಡಿದ ತಪ್ಪು ಯೌವನದಲ್ಲಿ,
ಯೌವನದಲ್ಲಿ ಮಾಡಿದ ತಪ್ಪು ಮಧ್ಯವಯಸ್ಸಿನಲ್ಲಿ,
ಮಧ್ಯ ವಯಸ್ಸಿನಲ್ಲಿ ಮಾಡಿದ ತಪ್ಪು ಮುಪ್ಪಿನಲ್ಲಿ,
ಮುಪ್ಪಿನಲ್ಲಿ ಮಾಡಿದ ತಪ್ಪು ಸಾಯುವಾಗ ಅರಿವಿಗೆ ಬರುತ್ತದೆ.

ಆದರೆ "ಮೂರ್ಖರಿಗೆ ತಪ್ಪಿನ ಅರಿವೆ ಆಗುವುದಿಲ್ಲ"

ಈ ಮೂರು ವಸ್ತುಗಳ ಬಲೆಗೆ ಬಿದ್ದು ಕೊನೆಗೆ ಪಶ್ಚಾತಾಪ ಪಟ್ಟ ಒಬ್ಬ ಸನ್ಯಾಸಿಯ (ವ್ಯೆರಾಗಿ) ಕಥೆ ನಿಮಗೆ ಹೇಳುತ್ತೇನೆ:

ಒಮ್ಮೆ ಒಬ್ಬ ಸನ್ಯಾಸಿಯು ನದಿ ದಾಟುತ್ತಿರುವಾಗ ಆಕಡೆ ದಂಡೆ ಕೊಚ್ಚಿ ಹೋಗಿರುವುದನ್ನು ಗಮನಿಸಿದ ನಂತರ ಸ್ವಲ್ಪ ದೂರದಲ್ಲಿ ಚಿನ್ನದ ನಾಣ್ಯಗಳಿಂದ ತುಂಬಿದ ಮಡಿಕೆಗಳನ್ನು ನೋಡಿದ. "ಪ್ರಪಂಚವನ್ನು ತಾನು ತ್ಯಜಿಸಿರುವುದರಿಂದ ಇದು ನನಗೆ ಬೇಕಿಲ್ಲ, ಆದರೆ ಇದನ್ನು ಉಪಯೋಗಿಸಿಕೊಂಡು ಒಂದು ದೇವಸ್ಥಾನವನ್ನು ಕಟ್ಟಿದರೆ ಚೆನ್ನಾಗಿ ಇರುತ್ತದೆ" ಯೆಂದು ಯೋಚಿಸಿದ. ಕಟ್ಟಡ ನಿರ್ಮಾಣ ಮಾಡುವವರ ಬಳಿಗೆ ಹೋಗಿ ತಾನು ಕಂಡ ನಿಧಿಯನ್ನು ತೋರಿಸಿ ಅದರಿಂದ ಒಂದು ದೇವಸ್ಥಾನವನ್ನು ಕಟ್ಟಿ ಕೋಡುವಂತೆ ಹೇಳಿದ. ಅವರು ತಮ್ಮಲ್ಲಿಯೇ ಮಾತಾಡಿಕೊಂಡು ಒಬ್ಬ ಸ್ವಾಮೀಜಿಗೆ ಇಷ್ಟೊಂದು ಐಶ್ವರ್ಯ ಯಾಕೆ ಕೊಡಬೇಕು ಅಂತ ಅವನ್ನನು ನೀರಿಗೆ ತಳ್ಳಿ ತಾವೇ ಆ ಚಿನ್ನದ ನಾಣ್ಯಗಳು ತುಂಬಿರುವ ಮಡಿಕೆಗಳನ್ನು ಅಪಹರಿಸಿದರು.

ಮುಳುಗೇ ಹೋಗಿದ್ದ ಆ ಸನ್ಯಾಸಿ ದೇವರ ದಯೆಯಿಂದ ಬದುಕಿ ಉಳಿದು ಒಂದು ಅತಿಂಮ ನಿರ್ಧಾರ ಮಾಡಿಬಿಟ್ಟ "ಏನಾದರು ಸರಿ ಇನ್ನ ಮುಂದೆ ಹಣದ ಸಹವಾಸ ಮತ್ತು ವ್ಯಾಮೋಹ ಬೇಡ". ಹೀಗೆ ನಿರ್ಧರಿಸಿ ಕಾಡಿನಲ್ಲಿ ಅಲೆಯುತ್ತ ಮತ್ತು ಧ್ಯಾನ ಮಾಡುತ್ತಾ ಕಾಲ ಕಳೆಯುತ್ತಿದ್ದನು. ಇವನನ್ನು ನೋಡಲು ಯಾರೆ ಬಂದರೂ "ಅಲ್ಲೆ ನಿಲ್ಲಿ ನಿಮ್ಮಲ್ಲಿ ಹಣ ಇದ್ದರೆ ಹತ್ತಿರಕ್ಕೆ ಬರುವುದಕ್ಕೆ ಮುಂಚೆ ಅದನ್ನು ಅಲ್ಲೆ ಇಟ್ಟು ಬನ್ನಿ" ಅಂತ ಹೇಳಿ ಅಮೇಲೆ ತನ್ನ ಭೇಟಿ ಮಾಡಲು ಅವಕಾಶ ಕೊಡುತಿದ್ದ.

ದಿನಗಳು ಕಳೆದಂತೆ ಒಂದು ಹೆಣ್ಣು ಈ ಸ್ವಾಮೀಜಿಯ ದರ್ಶನಕ್ಕೆ ಬಂದಳು. ಇವಳನ್ನು ನೋಡಿದ ಸ್ವಾಮೀಜಿ ಅಲ್ಲೇ ನಿಲ್ಲು "ಹತ್ತಿರ ಬರಬೇಡ" ಎಂದು ಆದೇಶ ನೀಡಿದನು. ಆಗ ಆಕೆ "ಸ್ವಾಮೀಜಿ ದಿನಾಲು ಬಂದು ಊಟವನ್ನು ಇಲ್ಲಿಟ್ಟು ಹೋರಟು ಹೋಗುತ್ತೀನಿ ಅಷ್ಟೆ" ಎಂದಳು. ಸಮ್ಮತಿ ಸಿಕ್ಕಿತು. ಆದರೆ ದಿನ ದಿನವೂ ಆಕೆ ಸ್ವಲ್ಪ ಸ್ವಲ್ಪ ಹತ್ತಿರವಾಗ ತೊಡಗಿದಳು. ಆಕೆ ಒಳ್ಳೆ ವ್ಯಕ್ತಿ ಎಂಬ ವಿಶ್ವಾಸ ಇತ್ತು ಈ ಸ್ವಾಮಿಗೆ "ಆಕೆ ನಿಜವಾಗಲು ತನ್ನ ಯೋಗ ಕ್ಷೇಮ ನೋಡಿಕೊಳ್ಳೋ ಮನಸ್ಸಿನವಳು ಹಾಗು ನನ್ನಿಂದ ಙ್ನಾನೋದಯ ದೊರಕಿಸಿ ಕೊಳ್ಳಬೇಕು ಅನ್ನೊ ಅಕಾಂಕ್ಷೆ ಆಕೆಯದು" ಎಂದು ಆತ ಆಲೋಚಿಸಿದ.

ಒಂದು ದಿನ ಸ್ವಾಮೀಜಿಯ ಜೊತೆಗಿರಲಿ ಎಂದು ಒಂದು ಬೆಕ್ಕನ್ನು ತಂದಳು. ಆದರೆ ಸ್ವಾಮೀಜಿಗೆ ತರುತ್ತಿದ್ದ ಆಹಾರವನ್ನು ಬೆಕ್ಕು ತಿನ್ನುತ್ತಿಲ್ಲವಾದ್ದರಿಂದ ಆತ ವಿನಂತಿ ಮಾಡಿದ, "ಈ ಬೆಕ್ಕಿಗೆ ದಿನಾ ಸ್ವಲ್ಪ ಹಾಲು ಬೇಕು". ಆಕೆ ಒಂದು ಹಾಲು ಕರೆಯುವ ಹಸುವನ್ನೆ ತಂದಳು. ಆತ ಕೇಳಿದ "ಈ ಹಸುವನ್ನು ನೋಡಿಕೊಳ್ಳುವವರು ಯಾರು?" "ನಾನು ನೋಡಿಕೊಳ್ಳಲೇನು " ಎಂದು ಕೇಳಿದಳು. ಸಮ್ಮತಿಸಿದ.

ಅವಳು ಸ್ವಾಮಿಯನ್ನು ತುಂಬಾ ಚೆನ್ನಾಗಿ ನೋಡಿಕೊಂಡಳು, ಪ್ರಸಂಗವಶಾತ್ ಅವರಿಬ್ಬರು ಜೊತೆಯಿರತೊಡಗಿದರು. ಆ ಹೆಣ್ಣು ಆತನ ಮಗುವಿಗೆ ತಾಯಿಯಾದಳು. ಹೀಗೆ ದಿನಗಳು ಉರುಳಿತು ಒಂದು ದಿನ ಈ ಸ್ವಾಮೀಜಿಗೆ ದೀಕ್ಷೆ ಕೊಟ್ಟ ಮತ್ತೊಬ್ಬ ಸ್ವಾಮಿ ಬಂದು ನೋಡಿ "ಏನಾಯಿತು ನಿನಗೆ ?" ಅಂತ ವಿಚಾರಿಸಿದಾಗ ಸ್ವಾಮೀಜಿ ನಡೆದ ವಿಚಾರಗಳನ್ನು ತಿಳಿಸಿದ. ತದನಂತರ ಮತ್ತೆ ಸ್ವಾಮೀಜಿಗೆ ಮನವರಿಕೆಯಾಗಿ ಈ ಪ್ರಾಪಂಚಿಕ ಬಂಧನಗಳನ್ನು ಬಿಟ್ಟು ಕಾಡಿಗೆ ಹೊರಟು ಹೋದ. ಶ್ರದ್ಧೆಯಿಂದ ಸಾಧನೆಗಳನ್ನು ಮಾಡಿ ಕೆಲವು ಸಿದ್ಧಿಗಳನ್ನು ಪಡೆದ.

ಒಮ್ಮೆ ಹತ್ತಿರದ ಹಳ್ಳಿಯವನು ತಾನು ಕಡು ಬಡವ, ತನ್ನ ಮಕ್ಕಳು ಊಟವಿಲ್ಲದೆ ಬಳಲುತ್ತಿದ್ದಾರೆ ದಯಮಾಡಿ ನನ್ನ ಬಡತನ ನಿವಾರಿಸಿ ಸಹಾಯ ಮಾಡಿ ಎಂದು ಅಂಗಲಾಚಿದ. ಅದಕ್ಕೆ ಈ ಸ್ವಾಮೀಜಿ "ತನಗೆ ಸಿದ್ಧಿಸಿರುವ ಒಂದು ಮಂತ್ರದ ಶಕ್ತಿಯಿಂದ ತನ್ನ ಗಡ್ಡದ ಒಂದು ಕೂದಲನ್ನು ತಗೋ ಇದನ್ನು ನಿನ್ನ ಮನೆಯಲ್ಲಿ ಇಡು, ಬೆಳಿಗ್ಗೆ ಇದನ್ನು ಇಟ್ಟ ಜಾಗದ ತುಂಬ ಹಣ ಇರುತ್ತದೆ, ಇದರಿಂದ ನಿನ್ನ ಕಷ್ಟಗಳನ್ನು ನಿವಾರಿಸಿಕೊಂದು ಆನಂದದಿಂದ ಜೀವನ ಸಾಗಿಸು". ಈ ವಿಷಯವನ್ನು ಯಾರಿಗೂ ಹೇಳಬೇಡ ಅಂತ ಹೇಳಿ ಕಳುಹಿಸಿದ.

ಆ ಹಳ್ಳಿಯವನು ಮನೆಗೆ ಬಂದು ಸಹಜವಾಗಿ ತನ್ನ ಹೆಂಡತಿಗೆ ಮಾತ್ರ ಈ ಗುಟ್ಟನ್ನು ಬಿಟ್ಟುಕೊಟ್ಟ. ಆಕೆ ಬೇರೆ ಅನೇಕರಿಗೆ ತಿಳಿಸಿದಳು. ಸುದ್ದಿ ವಿಸ್ತಾರವಾಗಿ ಹಬ್ಬಿ ಜನ ಸ್ವಾಮೀಜಿಯ ಗಡ್ಡದ ಒಂದು ಕೂದಲಿಗಾಗಿ ಕಿಕ್ಕಿರಿದರು. ಸ್ವಾಮೀಜಿಯ ಮೂಖ ಊದಿಕೊಂಡು ರಕ್ತ ಸೊರಲು ಹತ್ತಿತು. ತದನಂತರ ಹೇಗೊ ಆ ಜಾಗವನ್ನೆ ಬಿಟ್ಟು, ಜನಗಳಿಂದ ತಪ್ಪಿಸಿಕೊಂಡು ತುಂಬ ದೂರ ಹೊರಟು ಹೋದ.

ಇದರಿಂದ ನಾವು ಕಲಿತ ಪಾಠವೆಂದರೆ "ಹೊನ್ನು-ಹೆಣ್ಣು-ಕೀರ್ತಿ ಇವುಗಳ ಬೆನ್ನಟ್ಟುವುದರಿಂದ ಯಾವಾಗಲು ಒಳ್ಳೆಯದಕ್ಕಿಂತ ಕೆಟ್ಟ ಪರಿಣಾಮಗಳೇ ಜಾಸ್ತಿ."

ಆದ್ದರಿಂದ ನಾವಾದರು ಈ ಸ್ವಾಮೀಜಿಯಂತೆ ಅಂತ್ಯದಲ್ಲಿ ಪಾಠ ಕಲಿಯದೆ, ಇನ್ನಾದರು ಪ್ರೀತಿ, ವಿಶ್ವಾಸ, ನಂಬಿಕೆ, ಮನುಷ್ಯತ್ವ, ಸತ್ಯ, ಧರ್ಮ ಎಂಬ ಒಳ್ಳೆಯ ಗುಣಗಳನ್ನು ಅಳವಡಿಸಿ ಜೀವನ ಮಾಡಲು ಪ್ರಯತ್ನ ಪಡೋಣ!!

ಕೊನೆಯ ಮಾತು, ಈ ಮೂರು ವಸ್ತುಗಳು ನಮ್ಮ ಜೀವನಕ್ಕೆ ಅಮೂಲ್ಯ, ಇದಿಲ್ಲದೆ ನಮ್ಮ ಪ್ರಾಪಂಚಿಕ ಜೀವನ ಅಸಾಧ್ಯ, ಇದನ್ನು ಬಿಟ್ಟು ಬದುಕಿ ಅಂತ ಹೇಳುತ್ತಿಲ್ಲ ಆದರೆ ಇವು ನಮ್ಮ ಜೀವನದ ಅತ್ಯುನ್ನತ ವಸ್ತುಗಳಾಗಲು ಬಿಡಬಾರದು. ಇವಗಳು ನಮ್ಮನು ಸವಾರಿ ಮಾಡಬಾರದು.
"ನಮ್ಮಿಂದ ಇವುಗಳೇ ಹೊರತು ಇವುಗಳಿಂದ ನಾವಲ್ಲ" ಅನ್ನುವ ತತ್ವ ನೆನಪಿರಬೇಕು.

"ಅವುಗಳು ನಮ್ಮ ಜೀವನ ನಿರ್ವಹಣೆಗೆ ಬೇಕದ ಸಾಮಗ್ರಿಗಳೆ ಹೊರತು ಅದೇ ನಮ್ಮ ಜೀವನದ ಸಾರ್ಥಕತೆ ಮತ್ತು ಅದನ್ನು ಪಡೆಯಲೆಂದೆ ನಮ್ಮ ಈ ಜನ್ಮ ಅನ್ನುವ ಭಾವ ಬೇಡ."

No comments: