ನಮಸ್ಕಾರ...!

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು!!!


ರಚನೆ: ಹುಯಿಗೋಳ ನಾರಾಯಣ ರಾವ್, ಸಂಗೀತ: ಪಿ. ಕಾಳಿಂಗ ರಾವ್

ಈ ತಾಣದಲ್ಲಿ ತಮಗೆ,

ಕನ್ನಡದ ಮೇರು ಕೃತಿಗಳ ಆಯ್ದ ಕೆಲವು ಭಾಗಗಳು, ಕನ್ನಡ ನಾಡು, ನುಡಿ, ಜಲ,ಪರಿಸರ ಸೊಬಗು ಇತ್ಯಾದಿಗಳ ವಿಶ್ಲೇಷಣೆ, ಕನ್ನಡ ಜನ, ಭಾಷೆ, ಸಂಸ್ಕೃತಿ,ಸಾಹಿತ್ಯ,ಸಂಗೀತ,ಪರಂಪರೆಗಳ ಕಿರು ಪರಿಚಯಗಳು,
ಭೌತಿಕ, ಆಧ್ಯಾತ್ಮಿಕ ವಿಷಯಗಳು


ಸವಿಯಲು ದೊರೈಯುತ್ತದೆ !!!

..ಜೊತೆಗೆ ನನ್ನ ಕೆಲವು ವಯಕ್ತೀಕ ಅಭಿಪ್ರಾಯಗಳು!!


ಸಿರಿಗನ್ನಡಂ ಗೆಳ್ಗೆ ಸಿರಿಗನ್ನಡಂ ಬಾಳ್ಗೆ!!

Saturday, 13 December 2008

ಅರ್ಥ ವ್ಯರ್ಥ!

ಪಾಪಿಯಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯ,
ನಾಯ ಹಾಲು ನಾಯಿಗಲ್ಲದೆ ಪಂಚಾಮೃತಕ್ಕೆ ಸಲ್ಲದಯ್ಯ,
ನಮ್ಮ ಕೂಡಲ ಸಂಗಮನ ಶರಣರಿಗಲ್ಲದೆ ಮಾಡುವ ಅರ್ಥ, ವ್ಯರ್ಥ ಕಂಡಯ್ಯ!!

-ಬಸವಣ್ಣ

ತಾತ್ಪರ್ಯ: ಪಾಪಿಷ್ಠನು ಸಂಗ್ರಹಿಸಿದ ಹಣವು ಪ್ರಾಯಶ್ಚಿತ್ತಕ್ಕಾಗಿಯಲ್ಲದೆ (ಅಪರಾಧ ಮಾಡಿದ ಕರ್ಮಕ್ಕಾಗಿಯಲ್ಲದೆ) ಸತ್ಪಾತ್ರಕ್ಕಾಗಿ ಸಲ್ಲುವುದಿಲ್ಲ, ನಾಯಿಯ ಹಾಲು ನಾಯಿಯ ಮರಿಗಲ್ಲದೆ ಪಂಚಾಮೃತಕ್ಕೆ ಸಲ್ಲುವುದಿಲ್ಲ. ಇದರಂತೆ ಕೂಡಲ ಸಂಗಮದೇವನ ಶರಣರಿಗೆ ಸಲ್ಲಲಾರದ ಹಣವು ನಿಷ್ಪ್ರಯೋಜಕವಾದುದು.

No comments: