ನಮಸ್ಕಾರ...!

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು!!!


ರಚನೆ: ಹುಯಿಗೋಳ ನಾರಾಯಣ ರಾವ್, ಸಂಗೀತ: ಪಿ. ಕಾಳಿಂಗ ರಾವ್

ಈ ತಾಣದಲ್ಲಿ ತಮಗೆ,

ಕನ್ನಡದ ಮೇರು ಕೃತಿಗಳ ಆಯ್ದ ಕೆಲವು ಭಾಗಗಳು, ಕನ್ನಡ ನಾಡು, ನುಡಿ, ಜಲ,ಪರಿಸರ ಸೊಬಗು ಇತ್ಯಾದಿಗಳ ವಿಶ್ಲೇಷಣೆ, ಕನ್ನಡ ಜನ, ಭಾಷೆ, ಸಂಸ್ಕೃತಿ,ಸಾಹಿತ್ಯ,ಸಂಗೀತ,ಪರಂಪರೆಗಳ ಕಿರು ಪರಿಚಯಗಳು,
ಭೌತಿಕ, ಆಧ್ಯಾತ್ಮಿಕ ವಿಷಯಗಳು


ಸವಿಯಲು ದೊರೈಯುತ್ತದೆ !!!

..ಜೊತೆಗೆ ನನ್ನ ಕೆಲವು ವಯಕ್ತೀಕ ಅಭಿಪ್ರಾಯಗಳು!!


ಸಿರಿಗನ್ನಡಂ ಗೆಳ್ಗೆ ಸಿರಿಗನ್ನಡಂ ಬಾಳ್ಗೆ!!

Sunday 14 December 2008

ಮಕರ ಸಂಕ್ರಾಂತಿ

ನಮ್ಮ ಭೂಮಿಯಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳಿಗೆ ಸೂರ್ಯನೇ ಆಧಾರ.ಇಂತಹ ಸೂರ್ಯ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವ ಸಂಧಿ ಕಾಲಕ್ಕೆ "ಸಂಕ್ರ್‍ಆಂತಿ" ಅಥವ "ಸಂಕ್ರಮಣ" ಅಂತ ಕರೆಯುತ್ತಾರೆ. ಮಕರ ಸಂಕ್ರಾಂತಿಯಂದು ಸೂರ್ಯನು ಮಕರ ರಾಶಿಗೆ ಪ್ರವೇಶಿಸುತ್ತಾನೆ. ಇದೇ ಸಮಯ ಉತ್ತರಾಯಣ ಮತ್ತು ದಕ್ಷಿಣಾಯಣ ಪ್ರಾರಂಭದ ದಿನಗಳಾದ್ದರಿಂದ ಇನ್ನು ವಿಶೇಷ ಮಹತ್ವ ಹೊಂದಿದೆ. ಸಂಕ್ರಾಂತಿ ಒಂದು ತರಹದ ಸೂರ್ಯಾರಾಧನೆ.

ಈ ಸಮಯದ ನಂತರ ಇಷ್ಟು ದಿನ ದಕ್ಷಿಣದತ್ತ ಚಲಿಸುತ್ತಿದ್ದ ಸೂರ್ಯ ಇನ್ನು ಮುಂದೆ ಉತ್ತರ ದಿಕ್ಕಿಗೆ ತಿರುಗಿ ಚಲಿಸುತ್ತಾನೆ. ಹೀಗೆ ಸೂರ್ಯ ಪಥ (ದಾರಿ) ಬದಲಾವಣೆಯಿಂದ ನಮ್ಮ ದೇಶದಲ್ಲಿ ಕೊರೆಯುವ ಚಳಿ ಕಡಿಮೆಯಾಗಿ ಬಿಸಿಲಿನ ತಾಪಮನ ಮತ್ತು ಹಗಲು ಹೆಚ್ಚಾಗಲು ಪ್ರಾರಂಭಿಸುತ್ತದೆ.

ಈ ಹಬ್ಬವನ್ನು ಭೋಗಿ ಹಬ್ಬ, ಸಂಕ್ರಮಣ ಮತ್ತು ಕನುಹಬ್ಬ ಎಂದು ನಾನಾ ರೀತಿಯಿಂದ ಕರೆಯುತ್ತಾರೆ. ಇದನ್ನು ಹೆಚ್ಚಾಗಿ ದಕ್ಷಿಣ ಭಾರತದಲ್ಲಿ (ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳಗಳಲ್ಲಿ) ವಿವಿಧ ರೀತಿಯಲ್ಲಿ ಆಚರಿಸುತ್ತಾರೆ. ಇದು ಸುಗ್ಗಿಯನ್ನು ಸಾರುವ ಹಬ್ಬ. ದ್ರಾವಿಡ ಸಂಪ್ರದಾಯಸ್ಥರಿಗೆ ಸಂಭ್ರಮದ ಹಬ್ಬ.

ಈದಿನ ವಿವಾಹಿತ ಮತ್ತು ಅವಿವಾಹಿತ ಹೆಣ್ಣು ಮಕ್ಕಳು ಎಳ್ಳು, ಬೆಲ್ಲ, ಸಕ್ಕರೆ ಅಚ್ಚುಗಳು, ಕೊಬ್ಬರಿ, ನೆಲಗಡಲೆ, ಕಬ್ಬು, ಬಾಳೆಹಣ್ಣು, ಇತ್ತ್ಯಾದಿಗಳನ್ನು ಆಪ್ತೇಷ್ಟರಿಗೆ ಕೊಟ್ಟು ಹಬ್ಬದ ಸಂತಸ ಹಂಚಿ ಕೊಳ್ಳುತ್ತಾರೆ.

ಗ್ರಾಮೀಣ ಭಾಗದಲ್ಲಿ ರೈತರು ತಾವು ಬೆಳೆದ ವರ್ಷದ ಮೊದಲ ಬೆಳೆಯನ್ನು ದೇವರಿಗೆ ಅರ್ಪಿಸಿ ತದನಂತರ ಮುಂದಿನ ದಿನಗಳಲ್ಲಿ ತಮಗೆ ಒಳ್ಳೆ ಬೆಳೆ ಬರಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತಾರೆ. ತಮ್ಮ ಜಾನುವರುಗಳಿಗೆ (ಹಸು, ಎತ್ತು, ಇತ್ತ್ಯಾದಿ) ಮೈತೊಳೆದು ಸಿಂಗರಿಸಿ ಮೆರೆವಣಿಗೆ ಮಾಡುತ್ತಾರೆ. ಸಂಜೆ ಬೆಂಕಿಯ ಹೊಂಡ (ಹಳ್ಳ) ಮಾಡಿ (ಕಿಚ್ಚು) ತಮ್ಮ ಜಾನುವಾರುಗಳನ್ನು ಹಾಯಿಸುತ್ತಾರೆ.

ಶಾಸ್ತ್ರದ ದೃಷ್ಠಿಯ ಪ್ರಕಾರ ಸಂಕ್ರಾಂತಿಯಂದು ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ, ಬ್ರಾಹ್ಮಣರಿಗೆ ಅಥವ ದೇವಸ್ಥಾನದ ಅರ್ಚಕರಿಗೆ ದಾನ ಕೊಡಬೆಕು. ಸಂಜೆಯ ಹೊತ್ತು ದೇವಸ್ಥಾನಕ್ಕೆ ತೆರೆಳಿ ಎಳ್ಳಿನ ದೀಪ ಹಚ್ಚಬೇಕು. ಎಳ್ಳಿನ ಹಬ್ಬ ಎಂದೆ ಪ್ರಸಿದ್ದವಾಗಿರುವ ಈ ಹಬ್ಬದ ದಿನದಂದು ಎಳ್ಳನ್ನು ನಾನಾ ರೂಪಗಳಲ್ಲಿ ಬಳಸುತ್ತಾರೆ.

ತಂದೆ, ತಾಯಿಗೆ, ಗುರು ಹಿರಿಯರಿಗೆ "ಎಳ್ಳು-ಬೆಲ್ಲವ ಕೊಟ್ಟು ಒಳ್ಳೆ ಮಾತು ಆಡು" ಎಂಬ ವಾಕ್ಯವನ್ನು ಹೇಳುತ್ತಾ ಕೊಟ್ಟು ಆಶಿರ್ವಚನ ಪಡೆಯಬೇಕು. ಮಕರ ಸಂಕ್ರಾತಿಯನ್ನು ಉತ್ತರಾಯಣ ಪುಣ್ಯ ಕಾಲ ಅಂತಲು ಕರೆಯುವುದುಂಟು. ಈ ದಿನದಿಂದ ದಕ್ಷಿಣಾಯಣ ಬರುವವರೆಗೆ ದೇವರ ಕಾರ್ಯಗಳಿಗೆ ಪ್ರಶಸ್ತವಾದದ್ದು.

ಮಕರ ಸಂಕ್ರಾಂತಿಯ ದಿನದಿಂದ ದೇವತೆಗಳಿಗೆ ಹಗಲು ಮತ್ತು ರಾಕ್ಷಸರಿಗೆ ರಾತ್ರಿ ಆಗುವುದೆಂದು ನಮ್ಮ ಪುರ್‍ಆಣಗಳು ಹೇಳುತ್ತವೆ. ಆದ್ದರಿಂದಲೇ ಹಿರಿಯರು "ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡು" ಏಕೆಂದರೆ ದೇವತೆಗಳು ಸದಾ ಜಾಗೃತರಿರುತ್ತಾರೆ ಅಂತ ಹೇಳುತ್ತಾರೆ.

ಉತ್ತರ ಭಾರತದಲ್ಲಿ ಸಂಕ್ರಾತಿಯನ್ನು ಆಚರಿಸುತ್ತಾರೆ. ಅಲಹಬಾದ್ ನಲ್ಲಿ ಈ ವೇಳೆಗೆ ಸುಪ್ರಸಿದ್ಧವಾದ ಕುಂಭಮೇಳ ನಡೆಯುತ್ತದೆ.

ಕೊನೆಯ ಮಾತು, ನಮ್ಮ ಹಬ್ಬ ನಮ್ಮ ಸಂಸ್ಕೃತಿಯನ್ನು ಬಿಂಬುಸುತ್ತವೆ. ಇತ್ತೀಚಿನ ಜಾಗತೀಕರಣದ ಹೆಸರಿನಲ್ಲಿ ನಾವು ನಮ್ಮ ಹಬ್ಬಗಳ ಆಚರಣೆಯನ್ನೇ ಮರೆತಿದ್ದೇವೆ ಅಂತ ಹೇಳುವುದಕ್ಕೆ ನನಗೆ ತುಂಬಾ ಬೇಸರವಾಗುತ್ತದೆ. ನಮ್ಮ ಆಚರಣೆಗಳನ್ನು ನಾವು ಬಿಡುತ್ತಾ ಹೋದರೆ ನಮಗೂ ಮತ್ತು ಪಾಶ್ಚ್ಯಾತ್ಯ ದೇಶದವರಿಗೂ ವ್ಯತ್ಯಾಸವೇ ಇರುವುದಿಲ್ಲ. ವಿದೇಶಿಯರು ನಮ್ಮನ್ನು ಮತ್ತು ನಮ್ಮ ದೇಶವನ್ನು ಹೆಚ್ಚಾಗಿ ಪ್ರೀತಿಸಲು ಮತ್ತು ಗೌರವಿಸಲು ನಮ್ಮ ದೇಶದ ಈ ವೈವಿಧ್ಯತೆಗಳಿಂದ ಕೂಡಿರುವ ನಮ್ಮ ಸಂಸ್ಕೃತಿ ಮತ್ತು ಅದನ್ನು ಬಿಂಬಿಸುವ ಹಬ್ಬಗಳಿಗೋಸ್ಕರ ಮಾತ್ರ ಅನ್ನುವುದು ನೆನಪಿರಲಿ.

ಹಬ್ಬದ ಆಚರಣೆಗಳು ಮೂಢನಂಬಿಕೆಗಳಲ್ಲ ಈ ಹಬ್ಬಗಳು ನಮ್ಮಲ್ಲಿ ಹೊಸ ಶಕ್ತಿ, ಚೈತನ್ಯ, ಸಂಘಟನೆಯ ಮನೋಭಾವ ಮತ್ತು ಹುರುಪು ತುಂಬುವುದರಲ್ಲಿ ಸಂದೇಹವಿಲ್ಲ. ಹಬ್ಬದ ಹಿಂದುರುವ ಕಾರಣ ಮತ್ತು ವಿಧಾನವನ್ನು ತಿಳಿದು ಆಚರಿಸೋಣ. ಇದರಿಂದ ಹಬ್ಬಕ್ಕೆ ಇನ್ನುಷ್ಟು ಮೆರುಗು ತಂದು ಕೊಡುತ್ತದೆ.

- ರವಿದತ್ತ

No comments: