ನಮಸ್ಕಾರ...!

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು!!!


ರಚನೆ: ಹುಯಿಗೋಳ ನಾರಾಯಣ ರಾವ್, ಸಂಗೀತ: ಪಿ. ಕಾಳಿಂಗ ರಾವ್

ಈ ತಾಣದಲ್ಲಿ ತಮಗೆ,

ಕನ್ನಡದ ಮೇರು ಕೃತಿಗಳ ಆಯ್ದ ಕೆಲವು ಭಾಗಗಳು, ಕನ್ನಡ ನಾಡು, ನುಡಿ, ಜಲ,ಪರಿಸರ ಸೊಬಗು ಇತ್ಯಾದಿಗಳ ವಿಶ್ಲೇಷಣೆ, ಕನ್ನಡ ಜನ, ಭಾಷೆ, ಸಂಸ್ಕೃತಿ,ಸಾಹಿತ್ಯ,ಸಂಗೀತ,ಪರಂಪರೆಗಳ ಕಿರು ಪರಿಚಯಗಳು,
ಭೌತಿಕ, ಆಧ್ಯಾತ್ಮಿಕ ವಿಷಯಗಳು


ಸವಿಯಲು ದೊರೈಯುತ್ತದೆ !!!

..ಜೊತೆಗೆ ನನ್ನ ಕೆಲವು ವಯಕ್ತೀಕ ಅಭಿಪ್ರಾಯಗಳು!!


ಸಿರಿಗನ್ನಡಂ ಗೆಳ್ಗೆ ಸಿರಿಗನ್ನಡಂ ಬಾಳ್ಗೆ!!

Saturday, 20 December 2008

ಗುಣಕೆ ಕಾರಣವೊಂದೆ?

ತೃಣಕೆ ಹಸಿರೆಲ್ಲಿಯದು ? ಬೇರಿನದೆ ? ಮಣ್ಣಿನದೆ ? |
ದಿನಪನದೆ ? ಚಂದ್ರನದೆ ? ನೀರಿನದೆ ? ನಿನದೆ ? ||
ತಣಿತಣಿವ ನಿನ್ನ ಕಣ್ಣಿನ ಪುಣ್ಯವೋ ? ನೋಡು |
ಗುಣಕೆ ಕಾರಣವೊಂದೆ ? - ಮಂಕುತಿಮ್ಮ ||

-ಡಿ.ವಿ.ಜಿ

ತಾತ್ಪರ್ಯ: ಹಸಿರಾಗಿರುವ ಹುಲ್ಲು ನೋಡಲು ಚೆನ್ನ. ಆ ಹಸಿರು ಎಲ್ಲಿಂದ ಬಂತು ? ಅದರ ಸೌಂದರ್ಯ ಎಲ್ಲಿಂದ ಬಂತು ? ಬೇರಿನಿಂದಲೆ ? ಅಥವಾ ಅದಕ್ಕೆ ಸತ್ವವನ್ನು ಒದಗಿಸುವ ಮಣ್ಣಿನಿಂದಲೆ ? ನೀರಿನಿಂದಲೇ ? ಅಥವಾ ಮಣ್ಣಿನಿಂದ ಬಂದ ಸತ್ವ ಮತ್ತು ನೀರನ್ನು ರಸಾಯನಿಕವಾಗಿ ಸಂಯೋಗಗೊಳಿಸುವ ಸೂರ್ಯನಿಂದ ಆಯಿತೋ ? ಅಥವ ಓಷಧಿಗಳಿಗೆ ಒಡೆಯನಾದ ಚಂದ್ರನಿಂದ ಆದದ್ದೆ ? ಅಥವಾ ನಿನ್ನ ಕಣ್ಣೆ ಇದಕ್ಕೆ ಕಾರಣವೊ ? ಹಾಗೂ ಅಲ್ಲ, ನಿನ್ನ ಪುಣ್ಯವಿಶೇಷದಿಂದ ಆ ಹಸಿರು ನಿನಗೆ ಸಂತೋಷವನ್ನು ಕೊಡುತ್ತಿದೆಯೋ ? ಹೀಗೆ ಹಸಿರು ಬಣ್ಣ ಸಂತೋಷಜನಕವಾದ ಗುಣವನ್ನು ಹೊಂದಿದೆಯೆಂದರೆ ಅದಕ್ಕೆ ಒಂದೇ ಕಾರಣವೇ ? ಹೀಗೆ ನಮಗೆ ಸಂತೋಷ ಒದಗಿಸುವ ಗುಣ ವಿಶ್ಲೇಷಣಗೆ ಸಿಕ್ಕದೆ ಹೋಗುತ್ತದೆ.

No comments: