ನಮಸ್ಕಾರ...!

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು!!!


ರಚನೆ: ಹುಯಿಗೋಳ ನಾರಾಯಣ ರಾವ್, ಸಂಗೀತ: ಪಿ. ಕಾಳಿಂಗ ರಾವ್

ಈ ತಾಣದಲ್ಲಿ ತಮಗೆ,

ಕನ್ನಡದ ಮೇರು ಕೃತಿಗಳ ಆಯ್ದ ಕೆಲವು ಭಾಗಗಳು, ಕನ್ನಡ ನಾಡು, ನುಡಿ, ಜಲ,ಪರಿಸರ ಸೊಬಗು ಇತ್ಯಾದಿಗಳ ವಿಶ್ಲೇಷಣೆ, ಕನ್ನಡ ಜನ, ಭಾಷೆ, ಸಂಸ್ಕೃತಿ,ಸಾಹಿತ್ಯ,ಸಂಗೀತ,ಪರಂಪರೆಗಳ ಕಿರು ಪರಿಚಯಗಳು,
ಭೌತಿಕ, ಆಧ್ಯಾತ್ಮಿಕ ವಿಷಯಗಳು


ಸವಿಯಲು ದೊರೈಯುತ್ತದೆ !!!

..ಜೊತೆಗೆ ನನ್ನ ಕೆಲವು ವಯಕ್ತೀಕ ಅಭಿಪ್ರಾಯಗಳು!!


ಸಿರಿಗನ್ನಡಂ ಗೆಳ್ಗೆ ಸಿರಿಗನ್ನಡಂ ಬಾಳ್ಗೆ!!

Sunday 28 December 2008

ಮಾಸ್ತಿ ವೆಂಕಟೇಶ ಅಯ್ಯಂಗಾರ್

ಪೂರ್ಣ ನಾಮಧೇಯ: ಮಾಸ್ತಿ ವೆಂಕಟೇಶ ಅಯ್ಯಂಗಾರ್ ( " ಮಾಸ್ತಿ ಕನ್ನಡದ ಆಸ್ತಿ" )

ಜನನ: ೦೬ - ೦೬ - ೧೮೯೧

ಜನನ ಸ್ಥಳ: ಕೋಲಾರ ಜಿಲ್ಲೆಯ ಮಾಸ್ತಿ

ತಂದೆ, ತಾಯಿ: ತಂದೆ ರಾಮಸ್ವಾಮಿ ಅಯ್ಯಂಗಾರ್, ತಾಯಿ ತಿರುಮಲಮ್ಮ. ಇವರ ಕುಟುಂಬವನ್ನು ದೊಡ್ಡ ಮನೆಯವರು ಎಂದು ಕರೆಯುತ್ತಾರೆ.

ವ್ಯಾಸಂಗ: ಪದವಿ ಪಡೆದ ನಂತರ ಮೈಸೂರು ಸಿವಿಲ್ ಸರ್ವೀಸ್ ಪರೀಕ್ಷೆ ( ಎಂ. ಸಿ. ಎಸ್ ) ಗೆ ಕುಳಿತು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು.

ಸೇವೆ ಸಲ್ಲಿಸಿದ ಕ್ಷೇತ್ರಗಳು: ಉಪನ್ಯಾಸಕರಾಗಿ ಕೆಲಸ ಮಾಡಿ, ಮೈಸೂರು ಸರ್ಕಾರದಲ್ಲಿ ಕೆಲಸಕ್ಕೆ ಸೇರಿದರು. ಇವರು ಅಸಿಸ್ಟೆಂಟ್ ಕಮೀಷನರ್, ಅಸಿಸ್ಟೆಂಟ್ ಸೆಕ್ರೆಟರಿ, ಸಬ್ ಡಿವಿಜನ್ ಆಫೀಸರ್, ಡೆಪ್ಯುಟಿ ಕಮೀಷನರ್ ಆಗಿ ಕೊನೆಯಲ್ಲಿ ಎಕ್ಸೈಜ್ ಕಮೀಷನರ್ ಹುದ್ದೆಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ಸ್ವ-ಇಚ್ಚೆಯಿಂದ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಕನ್ನಡ ಸೇವೆಯನ್ನು ಕೈಗೊಂಡರು.

ಇವರು ತಾವೆ ಆರಂಭಿಸಿದ "ಜೀವನ" ಮಾಸ ಪತ್ರಿಕೆಯಲ್ಲಿ ಇವರು ಬರೆದ ಸಂಪಾದಕೀಯಗಳ ಸಂಗ್ರಹ, ಪ್ರಚಲಿತ ಸಂಗತಿಗಳನ್ನು ಕುರಿತು ಇವರು "ಜೀವನ" ದಲ್ಲಿ ಬರೆದ ಲೇಖನಗಳ ಸಂಗ್ರಹವನ್ನು ಪ್ರಕಟಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ಸುಮಾರು ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಪಿ.ಇ.ಎನ್. ಸಂಸ್ಥೆಯ ಭಾರತೀಯ ವಿಭಾಗದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.

ಸಾಹಿತ್ಯ ಕ್ಷೇತ್ರದ ಕೊಡುಗೆ:

ಕಥೆಗಳು: ಸಾಹಿತ್ಯ ರಂಗ ಪ್ರವೇಶಿಸಿದ್ದು "ರಂಗಣ್ಣನ ಮದುವೆ" ಎಂಬ ಸಣ್ಣಕಥೆಯ ಮೂಲಕ. ಇತರೆ ಸಣ್ಣ ಕಥೆಗಳಾದ "ಮಾಸ್ತಿ ಕನ್ನಡದ ಆಸ್ತಿ", "ಸಣ್ಣ ಕಥೆಗಳ ಜನಕ" ಎಂಬ ಸರಳ ಭಾಷೆಗಳಲ್ಲಿ ಸಣ್ಣ ಕಥೆಗಳನ್ನು ರಚಿಸಿದ್ದಾರೆ.

ಕೃತಿಗಳು: ಪ್ರಕಟಿತ ಕೃತಿಗಳ ಸಂಖ್ಯೆ ೧೨೦ ಮೀರಿದೆ. ಅದರಲ್ಲಿ ಕನ್ನಡ ಕೃತಿಗಳು ೧೦೮ ಮತ್ತು ಇಂಗ್ಲೀಷಿನಲ್ಲಿ ೧೬.

ಕಥನ ಕವನ: ಇವರ "ನವರಾತ್ರಿ" ಕಥಾ ಕವನದಲ್ಲಿ ಒಬ್ಬೊಬ್ಬ ಸಹೋದರ ಒಂದೊಂದು ಕಥೆಯನ್ನು ಹೇಳಿದಂತೆ ಬರೆದಿದ್ದಾರೆ. ನವರಾತ್ರಿಯಲ್ಲಿ ಒಟ್ಟು ೨೦ ಕಥೆಗಳಿವೆ. ಇದರಲ್ಲಿ ಬಿ.ಎಂ. ಶ್ರೀ ಕಂಠಯ್ಯ, ಟಿ. ಎಸ್. ವೆಂಕಣ್ಣಯ್ಯ ಏ. ಆರ್. ಕೃ., ಎಂ. ಆರ್. ಶ್ರೀ., ಮುಂತಾದ ಹಿರಿಯರ ವಿಶೇಷ ಗುಣಗಳನ್ನು ಚಿತ್ರಿಸಿದ್ದಾರೆ.

ಆತ್ಮ ಚರಿತೆ: "ಭಾವ" (ಮೂರು ಭಾಗಗಳಲ್ಲಿ) ಆತ್ಮ ಚರಿತೆಯನ್ನು ಬರೆದಿದ್ದಾರೆ.

ಪ್ರಶಸ್ತಿಗಳು ಮತ್ತು ಪುರಸ್ಕಾರಗಳು:

೧. ೧೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು - ಬೆಳಗಾವಿ - ೧೯೨೯
೨. "ರಾಜ ಸೇವಾ ಪ್ರಸಕ್ತ" ಬಿರುದನ್ನು ಮೈಸೂರಿನ ಅರಸರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ನೀಡಿ ಗೌರವಿಸಿದರು.
೩. ಮೈಸೂರು ಮತ್ತು ಕರ್ನಾಟಕ ವಿಶ್ವವಿದ್ಯಾನಿಲಯಗಳು "ಗೌರವ ಡಿ.ಲಿಟ್" ಪದವಿ ಕೊಟ್ಟು ಗೌರವಿಸಿದೆ.
೪. ಕನ್ನಡ ಸಾಹಿತ್ಯ ಪರಿಷತ್ತು "ಗೌರವ ಸದಸ್ಯತ್ವ" ನೀಡಿದೆ.
೫. "ಸಣ್ಣ ಕಥೆಗಳ ಸಂಗ್ರಹ" ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ - ೧೯೬೯
೬. "ಚಿಕ್ಕವೀರ ರಾಜೇಂದ್ರ" ಎಂಬ ಕಾದಂಬರಿಗೆ ಭಾರತದ ಅತ್ಯುನ್ನತ ಪ್ರಶಸ್ತಿ "ಙಾನ ಪೀಠ" ಲಭಿಸಿದೆ.

ಜೀವನ ವಿಶೇಷ: ಇವರು ಲೇಖಕರಾಗಿದ್ದರಲ್ಲದೆ ತಮ್ಮ ಪುಸ್ತಕಗಳನ್ನು ತಾವೇ ಪ್ರಕಟಿಸುತ್ತಿದ್ದರು. ಪುಸ್ತಕಗಳ ಬೆಲೆಯನ್ನು ಅತಿ ಕಡಿಮೆ ಇಡುತ್ತಿದ್ದರು. ಓದುಗರಿಗೆ ತಲುಪುವಂತೆ ಸಹಕರಿಸುತ್ತಿದ್ದರು. ತಮ್ಮ ಜೀವಿತಾನಂತರವು ಕನ್ನಡ ಪುಸ್ತಕಗಳು ಪ್ರಕಟವಾಗಲು ತಾವು ಗಳಿಸಿದ ಹಣದಲ್ಲಿ ಸ್ವಲ್ಪ ಭಾಗವನ್ನು ತೆಗೆದಿರಿಸಿದರು. ಹೀಗೆ ತಮ್ಮ ಜೊತೆಯ ಸಾಹಿತಿಗಳಿಗೆ ನೆರೆವಾಗುವುದು ಬಹಳ ಅಪರೂಪದ ನಡುವಳಿಕೆ.

ದೈವಾಧೀನ: ೯೫ ವರ್ಷಗಳ ಸಾರ್ಥಕ ಜೀವನವನ್ನು ನಡೆಸಿದ ಮಾಸ್ತಿಯವರು ತಾವು ಹುಟ್ಟಿದ ದಿನವೇ ಎಂದರೆ ೦೬ - ೦೬ - ೧೯೮೬ ರಂದು ದೈವಾಧೀನರಾದರು.

No comments: