ನಮಸ್ಕಾರ...!

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು!!!


ರಚನೆ: ಹುಯಿಗೋಳ ನಾರಾಯಣ ರಾವ್, ಸಂಗೀತ: ಪಿ. ಕಾಳಿಂಗ ರಾವ್

ಈ ತಾಣದಲ್ಲಿ ತಮಗೆ,

ಕನ್ನಡದ ಮೇರು ಕೃತಿಗಳ ಆಯ್ದ ಕೆಲವು ಭಾಗಗಳು, ಕನ್ನಡ ನಾಡು, ನುಡಿ, ಜಲ,ಪರಿಸರ ಸೊಬಗು ಇತ್ಯಾದಿಗಳ ವಿಶ್ಲೇಷಣೆ, ಕನ್ನಡ ಜನ, ಭಾಷೆ, ಸಂಸ್ಕೃತಿ,ಸಾಹಿತ್ಯ,ಸಂಗೀತ,ಪರಂಪರೆಗಳ ಕಿರು ಪರಿಚಯಗಳು,
ಭೌತಿಕ, ಆಧ್ಯಾತ್ಮಿಕ ವಿಷಯಗಳು


ಸವಿಯಲು ದೊರೈಯುತ್ತದೆ !!!

..ಜೊತೆಗೆ ನನ್ನ ಕೆಲವು ವಯಕ್ತೀಕ ಅಭಿಪ್ರಾಯಗಳು!!


ಸಿರಿಗನ್ನಡಂ ಗೆಳ್ಗೆ ಸಿರಿಗನ್ನಡಂ ಬಾಳ್ಗೆ!!

Sunday 28 December 2008

ಅಂತರಂಗದ ಅನುಭವಗಳು

ಆಗುಂಬೆಯಸ್ತಮಯ ದ್ರೋಣಪರ್ವತದುದಯ |
ತ್ಯಾಗರಾಜನ ಗಾನ ವಾಲ್ಮೀಕಿ ಕವನ ||
ಆಗಿಸವೆ ತಾವಿವೆಮ್ಮಂತರಂಗದಿ ಸತ್ಯ |
ಯೋಗಪುಲಕಾಂಕುರವ ? - ಮಂಕುತಿಮ್ಮ ||

- ಡಿ. ವಿ. ಜಿ

ತಾತ್ಪರ್ಯ: ಮೈಮರೆಸುವಂತ ಅನುಭವವನ್ನು ಉಂಟುಮಾಡಿ ಅಂತರಂಗದಲ್ಲಿ ಸತ್ಯದರ್ಶನ ಮಾಡಿಸುವ, ರೋಮಾಂಚವನ್ನುಂಟುಮಾಡುವ ಅನುಭವಗಳೂ ಇದೆ. ಆಗುಂಬೆಯಿಂದ ಕಾಣುವ ಸೂರ್ಯಾಸ್ತ, ಚಂದ್ರ ದ್ರೋಣ ಪರ್ವತದಿಂದ (ಇಗಿನ ಬಾಬ ಬುಡನ್ ಗಿರಿ) ಕಾಣಬರುವ ಸೂರ್ಯೋದಯ, ಹಾಗೆಯೇ ಮನಸನ್ನು ಕರಗಿಸುವ ತ್ಯಾಗರಾಜರ ಕೀರ್ತನೆಯ ಗಾನ ಮತ್ತು ವಾಲ್ಮೀಕಿ ಮಹರ್ಷಿಗಳ ರಾಮಾಯಣದ ಗಾನ ಮತ್ತು ಅವುಗಳು ವರ್ಣಿಸುವ ಘಟನೆ, ಪಾತ್ರ ಸಂಪತ್ತು.

No comments: