ನಮಸ್ಕಾರ...!

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು!!!


ರಚನೆ: ಹುಯಿಗೋಳ ನಾರಾಯಣ ರಾವ್, ಸಂಗೀತ: ಪಿ. ಕಾಳಿಂಗ ರಾವ್

ಈ ತಾಣದಲ್ಲಿ ತಮಗೆ,

ಕನ್ನಡದ ಮೇರು ಕೃತಿಗಳ ಆಯ್ದ ಕೆಲವು ಭಾಗಗಳು, ಕನ್ನಡ ನಾಡು, ನುಡಿ, ಜಲ,ಪರಿಸರ ಸೊಬಗು ಇತ್ಯಾದಿಗಳ ವಿಶ್ಲೇಷಣೆ, ಕನ್ನಡ ಜನ, ಭಾಷೆ, ಸಂಸ್ಕೃತಿ,ಸಾಹಿತ್ಯ,ಸಂಗೀತ,ಪರಂಪರೆಗಳ ಕಿರು ಪರಿಚಯಗಳು,
ಭೌತಿಕ, ಆಧ್ಯಾತ್ಮಿಕ ವಿಷಯಗಳು


ಸವಿಯಲು ದೊರೈಯುತ್ತದೆ !!!

..ಜೊತೆಗೆ ನನ್ನ ಕೆಲವು ವಯಕ್ತೀಕ ಅಭಿಪ್ರಾಯಗಳು!!


ಸಿರಿಗನ್ನಡಂ ಗೆಳ್ಗೆ ಸಿರಿಗನ್ನಡಂ ಬಾಳ್ಗೆ!!

Sunday, 14 December 2008

ವಿದ್ಯೆ ಮತ್ತು ವಿದ್ಯಾರ್ಥಿ

ಭಕ್ತಿಯಿಲ್ಲದ ಶಿಷ್ಯ | ಗೊತ್ತಿಕೊಟ್ಟುಪದೇಶ
ಬತ್ತಿದ ಕೆರೆಯ ಬಯಲಲ್ಲಿ - ರಾಜನವ
ಬಿತ್ತಿ ಬೆಳೆದಂತೆ ಸರ್ವಙ್ನ ||
- ಸರ್ವಙ್ನ

ತಾತ್ಪರ್ಯ: "ವಿದ್ಯಾ ದದಾತಿ ವಿನಯಂ" ವಿದ್ಯೆಯನ್ನು ಕಲಿಯುವ ವಿದ್ಯಾರ್ಥಿಯಲ್ಲಿ ನಯ-ವಿನಯ, ಗುರುವಿನಲ್ಲಿ ಭಕ್ತಿ ಮತ್ತು ಕಲಿಯುವುದರಲ್ಲಿ ಶ್ರದ್ಧೆ ಇರಬೇಕು. ಹಾಗಿಲ್ಲದೆ, ಅಹಂಕಾರಿಯಾಗಿದ್ದು, ಗುರುವಿನಲ್ಲಿ ಭಕ್ತಿಯನ್ನು ಹೊಂದಿರದ ಶಿಷ್ಯನಿಗೆ ಬಲವಂತ ಮಾಡಿ ನೀಡಿದ ವಿದ್ಯೆಯು ಬತ್ತಿದ ಕೆರೆಯ ಬಯಲಿನಲ್ಲಿ ರಾಜನ (ಒಂದು ವಿಧವಾದ ಧಾನ್ಯ)ವನ್ನು ಬಿತ್ತಿ ಬೆಳೆದಂತೆ. ಒಣಗಿದ ಕ್ಷೇತ್ರದಲ್ಲಿ ಧಾನ್ಯವು ಹೇಗೆ ಮೊಳೆಯಲಾರದೋ ಹಾಗೆ, ಭಕ್ತಿಯಿಲ್ಲದ ಶಿಷ್ಯನಿಗೆ ನೀಡಿದ ವಿದ್ಯೆ ವ್ಯರ್ಥ.

No comments: