ನಮಸ್ಕಾರ...!

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು!!!


ರಚನೆ: ಹುಯಿಗೋಳ ನಾರಾಯಣ ರಾವ್, ಸಂಗೀತ: ಪಿ. ಕಾಳಿಂಗ ರಾವ್

ಈ ತಾಣದಲ್ಲಿ ತಮಗೆ,

ಕನ್ನಡದ ಮೇರು ಕೃತಿಗಳ ಆಯ್ದ ಕೆಲವು ಭಾಗಗಳು, ಕನ್ನಡ ನಾಡು, ನುಡಿ, ಜಲ,ಪರಿಸರ ಸೊಬಗು ಇತ್ಯಾದಿಗಳ ವಿಶ್ಲೇಷಣೆ, ಕನ್ನಡ ಜನ, ಭಾಷೆ, ಸಂಸ್ಕೃತಿ,ಸಾಹಿತ್ಯ,ಸಂಗೀತ,ಪರಂಪರೆಗಳ ಕಿರು ಪರಿಚಯಗಳು,
ಭೌತಿಕ, ಆಧ್ಯಾತ್ಮಿಕ ವಿಷಯಗಳು


ಸವಿಯಲು ದೊರೈಯುತ್ತದೆ !!!

..ಜೊತೆಗೆ ನನ್ನ ಕೆಲವು ವಯಕ್ತೀಕ ಅಭಿಪ್ರಾಯಗಳು!!


ಸಿರಿಗನ್ನಡಂ ಗೆಳ್ಗೆ ಸಿರಿಗನ್ನಡಂ ಬಾಳ್ಗೆ!!

Sunday 14 December 2008

ದಯೆ, ಧರ್ಮ

ದಯೆವಿಲ್ಲದ ಧರ್ಮವದಾವುದಯ್ಯ ?
ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ, ದಯವೇ ಧರ್ಮದ ಮೂಲವಯ್ಯ.
ಕೂಡಲ ಸಂಗಯ್ಯನಂತಲ್ಲದೊಲ್ಲನಯ್ಯ
- ಬಸವಣ್ಣ

ತಾತ್ಪರ್ಯ: ಅಂತಃಕರಣವಿಲ್ಲದ ಧರ್ಮವು ಯಾವುದಿರುವುದು ? ಎಲ್ಲ ಪ್ರಾಣಿಗಳಲ್ಲಿ ಅಂತಃಕರಣವೇ ಅವಶ್ಯವಿದ್ದುದರಿಂದ ಅದು ಬೇಕೇ ಬೇಕು. ದಯವೆಂಬುದೇ ಧರ್ಮದ ಮೂಲ, ತಳಹದಿಯಾಗಿದೆ. ಹಾಗೆ ದಯೆವಿಲ್ಲದಂತಿದ್ದರೆ ಕೂಡಲ ಸಂಗಮದೇವನು ನಿರಾಕರಿಸುವನು. (ಮೆಚ್ಚಲಾರನು).

No comments: