ನಮಸ್ಕಾರ...!

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು!!!


ರಚನೆ: ಹುಯಿಗೋಳ ನಾರಾಯಣ ರಾವ್, ಸಂಗೀತ: ಪಿ. ಕಾಳಿಂಗ ರಾವ್

ಈ ತಾಣದಲ್ಲಿ ತಮಗೆ,

ಕನ್ನಡದ ಮೇರು ಕೃತಿಗಳ ಆಯ್ದ ಕೆಲವು ಭಾಗಗಳು, ಕನ್ನಡ ನಾಡು, ನುಡಿ, ಜಲ,ಪರಿಸರ ಸೊಬಗು ಇತ್ಯಾದಿಗಳ ವಿಶ್ಲೇಷಣೆ, ಕನ್ನಡ ಜನ, ಭಾಷೆ, ಸಂಸ್ಕೃತಿ,ಸಾಹಿತ್ಯ,ಸಂಗೀತ,ಪರಂಪರೆಗಳ ಕಿರು ಪರಿಚಯಗಳು,
ಭೌತಿಕ, ಆಧ್ಯಾತ್ಮಿಕ ವಿಷಯಗಳು


ಸವಿಯಲು ದೊರೈಯುತ್ತದೆ !!!

..ಜೊತೆಗೆ ನನ್ನ ಕೆಲವು ವಯಕ್ತೀಕ ಅಭಿಪ್ರಾಯಗಳು!!


ಸಿರಿಗನ್ನಡಂ ಗೆಳ್ಗೆ ಸಿರಿಗನ್ನಡಂ ಬಾಳ್ಗೆ!!

Sunday 14 December 2008

ದೇವರು ಇದ್ದಾನೆಯೇ ? ಕಾಣುವುದು ಹೇಗೆ?

ಹೌದು ಖಂಡಿತವಾಗಿಯೂ ದೇವರು ಇದ್ದಾನೆ. ಅದರಲ್ಲಿ ಸಂಶಯವೇ ಎಲ್ಲ. ಹಗಲು ನಮಗೆ ನಕ್ಷತ್ರಗಳು ಕಾಣುವುದಿಲ್ಲ, ಆದರೆ ನಕ್ಷತ್ರಗಳು ಇಲ್ಲವೇ? ಹಾಲಿನಲ್ಲಿ ಬೆಣ್ಣೆಯಿದೆ ಹಾಗಾದರೆ ಹಾಲನ್ನು ನೋಡಿದರೆ ಬೆಣ್ಣೆ ಕಾಣುವುದೇ? ಬೆಣ್ಣೆ ಕಾಣಬೇಕೆಂದರೆ ಹಾಲನ್ನು ಚೆನ್ನಾಗಿ ಕಡೆಯಬೇಕು. ಕೊಳದಲ್ಲಿ ಮೀನುಗಳಿವೆ, ಮೀನನ್ನು ಹಿಡಿಯಬೇಕೆಂದರೆ ನೀರಿಗೆ ಗಾಳ ಹಾಕಬೇಕು. ತಿಳಿದವರಿಂದ ಮೀನು ಹೀಡಿಯುವ ಪರಿಯನ್ನು ಅರಿತುಕೊಳ್ಳಬೇಕು. ಅನಂತರ ತಾಳ್ಮೆಯಿಂದ ದಡದ ಮೇಲೆ ಕೂಡಬೇಕು. ಗಾಳ ಮುಳುಗುವವರಗೆ ಕಾಯಬೇಕು. ಒಮ್ಮೆ ಅದು ನೀರೊಳಗೆ ಮುಳುಗಿತೆಂದರೆ, ಮೀನು ಹಿಡಿಯಿತೆಂದೇ ಅರ್ಥ. ಆಗ ಅದನ್ನು ಮೇಲೆ ಎಳೆದುಕೊಳ್ಳಬೇಕು.

ದೇವರನ್ನು ಕಾಣುವುದು ಹೀಗೆಯೆ, ಮೊದಲು ನಾವು ಗುರುವನ್ನು ಹುಡುಕಬೇಕು, ಅವರಿಂದ ದೇವರ ರೂಪ, ಗುಣ, ಜಪ, ತಪಗಳನ್ನು ಮತ್ತು ದೇವರನ್ನು ಕಾಣುವ ರೀತಿ ನೀತಿಗಳನ್ನು ಅರಿಯಬೇಕು. ನಮ್ಮ ಮನಸ್ಸೇ ಗಾಳ, ಪ್ರಾಣವೆಂಬುದೇ ಕೊಕ್ಕೆ, ನಾವು ಮಾಡುವ ಧ್ಯಾನ, ಜಪ, ತಪ ಎಲ್ಲವೂ ಕೊಕ್ಕೆಗೆ ಸಿಕ್ಕಿಸಿರುವ ತಿನಿಸು. ಅವಸರ ಪಡದೆ ಶ್ರದ್ಧೆಯಿಂದ ಕಾದರೆ ಮೀನು ಗಾಳವನ್ನು ಕಚ್ಚಿದಂತೆ ದೇವರು ನಮ್ಮನು ಹಿಡಿಯುತ್ತಾನೆ ಅರ್ಥಾತ್ ನಮಗೆ ತನ್ನ ದರುಶನ ನೀಡುತ್ತಾನೆ.

No comments: