ನಮಸ್ಕಾರ...!

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು!!!


ರಚನೆ: ಹುಯಿಗೋಳ ನಾರಾಯಣ ರಾವ್, ಸಂಗೀತ: ಪಿ. ಕಾಳಿಂಗ ರಾವ್

ಈ ತಾಣದಲ್ಲಿ ತಮಗೆ,

ಕನ್ನಡದ ಮೇರು ಕೃತಿಗಳ ಆಯ್ದ ಕೆಲವು ಭಾಗಗಳು, ಕನ್ನಡ ನಾಡು, ನುಡಿ, ಜಲ,ಪರಿಸರ ಸೊಬಗು ಇತ್ಯಾದಿಗಳ ವಿಶ್ಲೇಷಣೆ, ಕನ್ನಡ ಜನ, ಭಾಷೆ, ಸಂಸ್ಕೃತಿ,ಸಾಹಿತ್ಯ,ಸಂಗೀತ,ಪರಂಪರೆಗಳ ಕಿರು ಪರಿಚಯಗಳು,
ಭೌತಿಕ, ಆಧ್ಯಾತ್ಮಿಕ ವಿಷಯಗಳು


ಸವಿಯಲು ದೊರೈಯುತ್ತದೆ !!!

..ಜೊತೆಗೆ ನನ್ನ ಕೆಲವು ವಯಕ್ತೀಕ ಅಭಿಪ್ರಾಯಗಳು!!


ಸಿರಿಗನ್ನಡಂ ಗೆಳ್ಗೆ ಸಿರಿಗನ್ನಡಂ ಬಾಳ್ಗೆ!!

Sunday 14 December 2008

ಡಿ.ವಿ.ಜಿ

ಪೂರ್ಣ ನಾಮಧೇಯ: ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ

ಜನನ: ೧೭ - ೩ - ೧೮೮೭

ಜನನ ಸ್ಥಳ: ಕೋಲಾರ ಜಿಲ್ಲೆ.

ತಂದೆ, ತಾಯಿ: ತಂದೆ ವೆಂಕಟರಮಣಯ್ಯ, ತಾಯಿ ಅಲಮೇಲು. ತಂದೆ ಶಾಲಾ ಉಪಾಧ್ಯಾಯರಾಗಿದ್ದರು. ಬಡತನದ ಜೀವನ.
ವ್ಯಾಸಂಗ: ಶಾಲೆಯಲ್ಲಿ ಕಲಿತಿದ್ದು ಕಡಿಮೆ. ಜೀವನ ಶಾಲೆಯಲ್ಲಿ ಕಲಿತಿದ್ದು ಅಪಾರ. ಸ್ವಂತ ಪರಿಶ್ರಮದಿಂದ ವಿದ್ವಾಂಸರಾದರು.

ಆಸಕ್ತಿಗಳು: ಇವರಿಗೆ ಸಂಗೀತ ಕ್ಷೇತ್ರದಲ್ಲಿ ಅಪಾರ ಆಸಕ್ತಿ. ಇವರ ಕೃತಿಗಳಲ್ಲಿ ಅನೇಕ ಕವಿತೆಗಳಿಗೆ ರಾಗ, ತಾಳಗಳನ್ನು ಸೂಚಿಸಲಾಗಿದೆ.

ಸೇವೆ ಸಲ್ಲಿಸಿದ ಕ್ಷೇತ್ರಗಳು: ಪತ್ರಿಕಾರಂಗದಲ್ಲಿ ಇವರ ಸೇವೆ ಬಹು ಜನರಿಗೆ ಗೊತ್ತಿಲ್ಲವಿರಬಹುದು. ಇವರು ಕೆಲಸ ಮಾಡಿದ ಕೆಲುವು ಪತ್ರಿಕೆಗಳ ಹೆಸರು ಹೀಗಿವೆ:

೧. ಭಾರತಿ - ದಿನಪತ್ರಿಕೆ
೨. ಕರ್ನಾಟಕ ಜೀವನ
೩. ಅರ್ಥಸಾಧಕ
೪. ಕರ್ನಾಟಕ ರೆವ್ಯು - ಅರೆ ವಾರಪತ್ರಿಕೆ
೫. ಸಾರ್ವಜನಿಕ - ತ್ರೈಮಾಸಿಕ

ಇವರ ಸೇವೆ ಗುರುತಿಸಿ ಕರ್ನಾಟಕ ಪತ್ರಕರ್ತರ ಸಮ್ಮೇಳನದ ಅಧ್ಯಕ್ಷರಾಗಿ (೧೯೨೮ - ಬಾಗಲಕೋಟೆ, ೧೯೪೦-ಮೈಸೂರು) ಆಯ್ಕೆ ಮಾಡಿ ಗೌರವಿಸಿದರು.

ಕನ್ನಡ ಸಾಹಿತ್ಯ ಕ್ಷೇತ್ರದ ಕೊಡುಗೆ:

ಕವಿತೆ ಕಾವ್ಯ: ನಿವೇದನ, ವಸಂತ ಕುಸುಮಾಂಜಲಿ, ಅಂತ:ಪುರ ಗೀತೆಗಳು, ಮಂಕುತಿಮ್ಮನ ಕಗ್ಗ, ಮರಳು ಮುನಿಯನ ಕಗ್ಗ, ಶ್ರೀರಾಮ ಪರೀಕ್ಷಣಂ, ಶ್ರೀಕೃಷ್ಣ ಪರೀಕ್ಷಣಂ, ಶೃಂಗಾರ ಮಂಗಳ, ಸ್ವತಂತ್ರ ಭಾರತ, ಅಭಿನಂದನಸ್ತವ ಇತ್ಯಾದಿ.

ವಿಮರ್ಶೆ: ಜೀವನ ಸೌಂದರ್ಯ ಮತ್ತು ಸಾಹಿತ್ಯ, ಸಾಹಿತ್ಯ ಶಕ್ತಿ, ಸಂಸ್ಕೃತಿ, ಬಾಳಿಗೊಂದು ನಂಬಿಕೆ, ಗೀತಾತಾತ್ಪರ್ಯ ಅಥವಾ ಜೀವನ ಧರ್ಮಯೋಗ, ರಾಜ್ಯಶಾಸ್ತ್ರ.

ಜೀವನ ಚರಿತ್ರೆ: ಅವರ ಅದರ್ಶ ವ್ಯಕ್ತಿ ಗೋಪಾಲಕೃಷ್ಣ ಗೋಖಲೆ ಮತ್ತು ಮೈಸೂರು ಸಂಸ್ಥಾನದ ದೀವಾನರಾಗಿದ್ದ ದಿವಾನ್ ರಂಗಾಚಾರ್ಲು, ಅವರ ಜೀವನದಲ್ಲಿ ಬಂದ ಉದಾತ್ತ ವ್ಯಕ್ತಿಗಳ, ಸಾಹಿತಿಗಳ, ಕಲಾವಿದರ, ಸಮಾಜ ಸೇವಕರ ವ್ಯಕ್ತಿ ಪರಿಚಯಗಳನ್ನು ಒಳಗೊಂಡ ಙ್ನಾಪಕ ಚಿತ್ರಶಾಲೆ ಎಂಬ ಎಂಟು (೮) ಸಂಪುಟಗಳನ್ನು ಪ್ರಕಟಿಸಿದ್ದಾರೆ.

ನಾಟಕ: ವಿದ್ಯಾರಣ್ಯ ವಿಜಯ, ಪರಶುರಾಮ

ಅನುವಾದ: ಉಮರನ ಒಸಗೆ - ಉಮ್ಮರ್ ಖಯ್ಯಾಮ್ ಕವಿಯ ಕೃತಿಯ ಸೊಗಸಾದ ಕನ್ನಡ ಅನುವಾದ.

ಪ್ರಶಸ್ತಿಗಳು ಮತ್ತು ಪುರಸ್ಕಾರಗಳು:

೧. ಗೌರವ ಡಾಕ್ಟರ್‍ಏಟ್ ಮೈಸೂರು ವಿ.ವಿ ೧೯೬೧
೨. ೧೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ (ಮಡಿಕೇರಿ)
೩. ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ - ಧರ್ಮಯೋಗ ಕೃತಿ
೪. ಪದ್ಮಭೂಷಣ ೧೯೭೪

ಜೀವನ ವಿಶೇಷ: ಜೀವನದಲ್ಲಿ ಸ್ವಂತಕ್ಕಾಗಿ ಹೆಚ್ಚೇನು ಅಪೇಕ್ಷೆಸದ, ಪ್ರಚಾರಕ್ಕೆ ಇಷ್ಟಪಡದ "ವನಕುಸುಮದಂತೆ", ಋಜುಬಾಳ್ವೆಯನ್ನು ನಡೆಸಿದವರು. ಮುಳುಬಾಗಿಲಿನಲ್ಲಿ ತಮ್ಮ ಹಿರಿಯರು ಸಂಪಾದಿಸಿದ್ದ ಮನೆಯನ್ನು ಸರ್ಕಾರಿ ಶಾಲೆಗೆ ದಾನವಾಗಿ ನೀಡಿದರು. ಇವರ ಸಲಹೆಗಳನ್ನು ಸ್ವೀಕರಿಸುತ್ತಿದ್ದ ದಿವಾನ್ ಸರ್. ಎಂ. ವಿಶ್ವೇಶ್ವರಯ್ಯನವರು ಇವರಿಗೆ ಕಳುಹಿಸಿದ ಚೆಕ್ಕುಗಳು ಬ್ಯಾಂಕಿಗೆ ಹೋಗದೆ ಇವರಲ್ಲಿಯೇ ಉಳಿದಿದ್ದವು. ಕನ್ನಡ ಸಾಹಿತ್ಯ ಪರಿಷತ್ ಕಟ್ಟಿ ಬೆಳೆಸಿದವರು ಡಿ.ವಿ.ಜಿಯವರು. ಪರಷತ್ತಿನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

ಬೆಂಗಳೂರಿನ ತ್ಯಾಗರಾಜ ಕಾಲೋನಿ (ನ. ರ. ಕಾಲೋನಿ) ಯಲ್ಲಿ ಇರುವು "ಗೋಖಲೆ ಸಾರ್ವಜನಿಕ ಸಂಸ್ಥೆಯನ್ನು ಅರಂಭಿಸಿ ಹಲವು ವರ್ಷಗಳವರೆಗೆ ನಡೆಸಿಕೊಂಡು ಬಂದವರು ಡಿ.ವಿ.ಜಿ.

ಈಗಲು ಬೆಂಗಳೂರಿನ ಬಸವನಗುಡಿ ಕ್ಷೇತ್ರದಲ್ಲಿ ಇವರ ಹೆಸರಿನಲ್ಲಿರುವ "ಡಿ.ವಿ.ಜಿ ರಸ್ತೆ" ಬಹು ಪ್ರಖ್ಯಾತ. ಇದನ್ನು ದಕ್ಷಿಣ ಬೆಂಗಳೂರಿನ ಎಂ.ಜಿ ರಸ್ತೆಯೆಂದೇ ಕರೆಯಲಾಗುತ್ತದೆ. ಇವರ ಪ್ರತಿಮೆಯನ್ನು ಈ ರಸ್ತೆಯಿಂದ ಸ್ವಲ್ಪ ದೂರದಲ್ಲಿ ಇರುವ "ಕಹಳೆ ಬಂಡೆ (ಬ್ಯುಗಲ್ ರ್‍ಯಾಕ್)" ಉದ್ಯಾನವನದಲ್ಲಿ ಕಾಣಬಹುದಾಗಿದೆ.

ದೈವಾಧೀನ: ಇವರು ೮೮ ವರ್ಷಗಳ ಕಾಲ ತುಂಬು ಜೀವನ ನಡೆಸಿ ೭-೧೦-೧೯೭೫ ರಲ್ಲಿ ದೈವಾಧೀನರಾದರು.

No comments: