ನಮಸ್ಕಾರ...!

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು!!!


ರಚನೆ: ಹುಯಿಗೋಳ ನಾರಾಯಣ ರಾವ್, ಸಂಗೀತ: ಪಿ. ಕಾಳಿಂಗ ರಾವ್

ಈ ತಾಣದಲ್ಲಿ ತಮಗೆ,

ಕನ್ನಡದ ಮೇರು ಕೃತಿಗಳ ಆಯ್ದ ಕೆಲವು ಭಾಗಗಳು, ಕನ್ನಡ ನಾಡು, ನುಡಿ, ಜಲ,ಪರಿಸರ ಸೊಬಗು ಇತ್ಯಾದಿಗಳ ವಿಶ್ಲೇಷಣೆ, ಕನ್ನಡ ಜನ, ಭಾಷೆ, ಸಂಸ್ಕೃತಿ,ಸಾಹಿತ್ಯ,ಸಂಗೀತ,ಪರಂಪರೆಗಳ ಕಿರು ಪರಿಚಯಗಳು,
ಭೌತಿಕ, ಆಧ್ಯಾತ್ಮಿಕ ವಿಷಯಗಳು


ಸವಿಯಲು ದೊರೈಯುತ್ತದೆ !!!

..ಜೊತೆಗೆ ನನ್ನ ಕೆಲವು ವಯಕ್ತೀಕ ಅಭಿಪ್ರಾಯಗಳು!!


ಸಿರಿಗನ್ನಡಂ ಗೆಳ್ಗೆ ಸಿರಿಗನ್ನಡಂ ಬಾಳ್ಗೆ!!

Saturday 20 December 2008

ವಿ.ಕೃ. ಗೋಕಾಕ

ಪೂರ್ಣ ನಾಮಧೇಯ: ವಿನಾಯಕ ಕೃಷ್ಣ ಗೋಕಾಕ
ಜನನ: ೦೯ - ೦೮ - ೧೯೦೯

ಜನನ ಸ್ಥಳ: ಧಾರವಾಡ ಜಿಲ್ಲೆಯ ಸವಣೂರು.

ತಂದೆ, ತಾಯಿ: ತಂದೆ ಕೃಷ್ಣರಾಯರು, ತಾಯಿ ಸುಂದರಮ್ಮ. ತಂದೆ ಜ್ಯೋತಿಷ್ಯಾಸ್ತ್ರದ ಪಂಡಿತರು ಮತ್ತು ವೃತ್ತಿಯಲ್ಲಿ ವಕೀಲರು. ಗೋಕಾಕರವರ ತಾತ ಇಂಗ್ಲೀಷ್ನಲ್ಲಿ ಕವಿತೆಗಳನ್ನು ರಚಿಸುತ್ತಿದ್ದರು. ಸಾಹಿತ್ಯರಚನೆ ವಂಶ ಪಾರಂಪರೆಯಾಗಿ ಬಂದದ್ದು ಅಂತ ಹೇಳಬಹುದು.

ವ್ಯಾಸಂಗ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಟ್ಟೂರಿನಲ್ಲಿ. ವಿದ್ಯಾರ್ಥಿದೆಸೆಯಿಂದಲೆ ಕೃತಿರಚನೆ ಪ್ರಾರಂಭ. ೧೯೨೯ ರಲ್ಲಿ ಬಿ.ಎ ಪದವಿಯನ್ನು ಮತ್ತು ಮುಂಬಯಿ ವಿಶ್ವವಿದ್ಯಾನಿಲಯದಿಂದ ೧೯೩೧ ರಲ್ಲಿ ಇಂಗ್ಲೀಷಿನಲ್ಲಿ ಎಂ.ಎ ಪದವಿಯನ್ನು ಪಡೆದರು. ಇಂಗ್ಲೇಂಡಿನ ಆಕ್ಸಫರ್ಡ್ ವಿಶ್ವವಿದ್ಯಾನಿಲಯದಿಂದ ಮೊದಲನೆ ದರ್ಜೆಯಲ್ಲಿ ಪದವಿಯನ್ನು ಪಡೆದರು.

ವೃತ್ತಿ ಜೀವನ: ಇಂಗ್ಲೀಷ್ ಅಧ್ಯಾಪಕರಾಗಿ ಆರಂಭಿಸಿದರು. ತದನಂತರ ಉಪಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಪ್ರಿನ್ಸಿಪಾಲರಾಗಿ, ವಿವಿಧ ಹುದ್ದೆಗಳಲ್ಲಿ ಪುಣೆ, ಸಾಂಗ್ಲಿ, ಹೈದರಬಾದ್, ಉತ್ತರ ಗುಜುರಾತಿನ ವೀಸಾನಗರ, ಕೊಲ್ಲಾಪುರ ಮುಂತಾದ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸುಮಾರು ೧೯೩೧ ರಿಂದ ೧೯೭೦ ರವರೆಗೆ ನಾಲ್ಕು ದಶಕಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಇವರ ಸೇವೆ ಶ್ಲಾಘನೀಯ.

- ಹೈದರಬಾದ್ ಸೆಂಟ್ರಲ್ ಇನ್ಸಿಟ್ಯೂಟ್ ಆಫ್ ಇಂಗ್ಲೀಷ್ ನಿರ್ದೇಶಕರಾಗಿ
- ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ
- ಸಿಮ್ಲಾದ ಇನ್ಸಿಟ್ಯೂಟ್ ಆಫ್ ಆಡ್ವಾನ್ಸ್ಡ್ ಸ್ಟಡೀಸ್ ನಿರ್ದೇಶಕರಾಗಿ

ಸಾಹಿತ್ಯ ಕ್ಷೇತ್ರದ ಕೊಡುಗೆ:

ಕೃತಿಗಳು: ೪೦ಕ್ಕೂ ಅಧಿಕ ಕನ್ನಡ (ಮತ್ತು ಇಂಗ್ಲೀಷ್ ಕೂಡ) ಕೃತಿಗಳ ರಚನೆ ಮತ್ತು ಪ್ರಕಟಣೆ. ಇಂಗ್ಲೀಷಿನಲ್ಲಿ "ಡಿ.ಆರ್.ಬೇಂದ್ರೆ ದಿ ಪೊಯಟ್ ಅಂಡ್ ದಿ ಸೀಯರ್" ಹಾಗೆಯೇ ಮಹರ್ಶಿ ಅರವಿಂದರ ಆರಾಧಕರಾಗಿದ್ದ ಗೋಕಾಕರು "ಶ್ರೀ ಅರವಿಂದೋ ಸೀಯರ್ ಅಂಡ್ ಪೊಯೆಟ್" ಎಂಬ ಕೃತಿಗಳನ್ನು ರಚಿಸಿದ್ದಾರೆ.

ಕಾದಂಬರಿ:"ಸಮರಸವೇ ಜೀವನ" ಉತ್ತಮವಾದ ಬೃಹತ್ ಕಾದಂಬರಿ. "ಇಜ್ಜೋಡು" ಎಂದು ಆರಂಭಿಸಿದ ಈ ಕಾದಂಬರಿ ಬೆಳೆದು ದೊಡ್ದದಾಗಿ ಬೃಹತ್ ಕಾದಂಬರಿಯಾಯಿತು.

ಕವನಸಂಕಲನ : ಇವರ ೩೦ ಕವನ ಸಂಕಲನಗಳು ಪ್ರಕಟವಾಗಿವೆ. ಇದರಲ್ಲಿ "ದ್ಯಾವಾಪೃಥಿವೀ", "ಬಾಳ ದೇಗುಲದಲ್ಲಿ" ಬಹು ಪ್ರಖ್ಯಾತವಾಯಿತು.

ಮಹಾಕಾವ್ಯ: ಇವರು ಎರಡು ಭಾಗಗಳಲ್ಲಿ "ಭಾರತ ಸಿಂಧು ರಶ್ಮಿ" ಎಂಬ ಮಹಾಕಾವ್ಯವನ್ನು ರಚಿಸಿದ್ದಾರೆ.

ನಾಟಕಗಳು: ಇವರು "ಜನನಾಯಕ, ಯುಗಾಂತರ, ವಿಮರ್ಶಕ ವೈದ್ಯ, ಮುನಿದ ಮಾರಿ" ಮುಂತಾದ ನಾಟಕಗಳನ್ನು ರಚಿಸಿದ್ದಾರೆ.

ವಿಮರ್ಶೆ: ಇವರು "ಇಂದಿನ ಕಾವ್ಯದ ಗೊತ್ತು ಗುರಿಗಳು, ನವ್ಯತೆ ಹಾಗೂ ಕಾವ್ಯಜೀವನ, ಆಂಗ್ಲ ಸಾಹಿತ್ಯ ನೀಡಿದ ಸ್ಪೂರ್ತಿ, ಸೌಂದರ್ಯ ಸಮೀಕ್ಷೆ" ಮುಂತಾದ ವಿಮರ್ಶೆಗಳನ್ನು ರಚಿಸಿದ್ದಾರೆ.

ವಿದೇಶ ಪ್ರವಾಸಗಳು: ಇವರು ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡಿಗೆ ಪ್ರವಾಸ ಹೋಗಿದ್ದರು. ನಂತರ ಇವರು ನಾನಾ ಕಾರಣಗಳಿಂದ ಜಪಾನ್, ಅಮೆರಿಕಾ, ಬೆಲ್ಜಿಯಂ, ಇಟಲಿ, ಗ್ರೀಸ್ ದೇಶಗಳಿಗೆ ಪ್ರವಾಸ ಕೈಗೊಂಡಿದ್ದರು.

ಜೀವನ ಚರಿತ್ರೆ: ಅವರ ಅದರ್ಶ ವ್ಯಕ್ತಿ ಗೋಪಾಲಕೃಷ್ಣ ಗೋಖಲೆ ಮತ್ತು ಮೈಸೂರು ಸಂಸ್ಥಾನದ ದೀವಾನರಾಗಿದ್ದ ದಿವಾನ್ ರಂಗಾಚಾರ್ಲು, ಅವರ ಜೀವನದಲ್ಲಿ ಬಂದ ಉದಾತ್ತ ವ್ಯಕ್ತಿಗಳ, ಸಾಹಿತಿಗಳ, ಕಲಾವಿದರ, ಸಮಾಜ ಸೇವಕರ ವ್ಯಕ್ತಿ ಪರಿಚಯಗಳನ್ನು ಒಳಗೊಂಡ ಙ್ನಾಪಕ ಚಿತ್ರಶಾಲೆ ಎಂಬ ಎಂಟು (೮) ಸಂಪುಟಗಳನ್ನು ಪ್ರಕಟಿಸಿದ್ದಾರೆ.

ಪ್ರಶಸ್ತಿಗಳು ಮತ್ತು ಪುರಸ್ಕಾರಗಳು:

೧. ಮಹಾಕಾವ್ಯ "ಭಾರತ ಸಿಂಧು ರಶ್ಮಿ" ಙಾನಪೀಠ ಪ್ರಶಸ್ತಿ.
೨. ಭಾರತ ಸರ್ಕಾರದ "ಪದ್ಮಶ್ರೀ" - ೧೯೬೦
೩. "ದ್ಯಾವಾಪೃಥಿವಿ" - ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
೨. ಕರ್ನಾಟಕ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ - ೧೯೬೭
೩. ಕ್ಯಾಲಿಫೊರ್ನಿಯಾದ ಫೆಸಿಫಿಕ್ ವಿಶ್ವವಿದ್ಯಾನಿಲಯಳು ಗೌರವ ಡಾಕ್ಟರೇಟ್ - ೧೯೬೯
೪. "ಗೌರವ ಸದಸ್ಯತ್ವ" ಕನ್ನಡ ಸಾಹಿತ್ಯ ಪರಿಷತ್ತು.
೫. "ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು" - ಬಳ್ಳಾರಿ - ೧೯೫೮

ದೈವಾಧೀನ: ಇವರು ೨೮ -೪ - ೧೯೯೨ ರಲ್ಲಿ ದೈವಾಧೀನರಾದರು.

No comments: