ನಮಸ್ಕಾರ...!

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು!!!


ರಚನೆ: ಹುಯಿಗೋಳ ನಾರಾಯಣ ರಾವ್, ಸಂಗೀತ: ಪಿ. ಕಾಳಿಂಗ ರಾವ್

ಈ ತಾಣದಲ್ಲಿ ತಮಗೆ,

ಕನ್ನಡದ ಮೇರು ಕೃತಿಗಳ ಆಯ್ದ ಕೆಲವು ಭಾಗಗಳು, ಕನ್ನಡ ನಾಡು, ನುಡಿ, ಜಲ,ಪರಿಸರ ಸೊಬಗು ಇತ್ಯಾದಿಗಳ ವಿಶ್ಲೇಷಣೆ, ಕನ್ನಡ ಜನ, ಭಾಷೆ, ಸಂಸ್ಕೃತಿ,ಸಾಹಿತ್ಯ,ಸಂಗೀತ,ಪರಂಪರೆಗಳ ಕಿರು ಪರಿಚಯಗಳು,
ಭೌತಿಕ, ಆಧ್ಯಾತ್ಮಿಕ ವಿಷಯಗಳು


ಸವಿಯಲು ದೊರೈಯುತ್ತದೆ !!!

..ಜೊತೆಗೆ ನನ್ನ ಕೆಲವು ವಯಕ್ತೀಕ ಅಭಿಪ್ರಾಯಗಳು!!


ಸಿರಿಗನ್ನಡಂ ಗೆಳ್ಗೆ ಸಿರಿಗನ್ನಡಂ ಬಾಳ್ಗೆ!!

Saturday, 20 December 2008

ನೀನೊಲಿದರೆ...!

ನೀನೊಲಿದರೆ ಕೊರಡು ಕೊನರುವುದಯ್ಯ, ನೀನೊಲಿದರೆ ಬರಡ ಹಯನಹುದಯ್ಯ,
ನೀನೊಲಿದರೆ ವಿಷವೇ ಅಮೃತವಹುದಯ್ಯ,
ನೀನೊಲಿದರೆ ಸಕಲ ಪಡಿಪದಾರ್ಥ ಇದಿರಲಿರ್ಪುವು ಕೂಡಲ ಸಂಗಮದೇವ ||

- ಬಸವಣ್ಣ

ತಾತ್ಪರ್ಯ: ಕೂಡಲ ಸಂಗಮದೇವಾ, ನೀನು ಮೆಚ್ಚಿಕೊಂಡರೆ ಒಣದಾದ ಕಟ್ಟಿಗೆಯ ಕೊರಡು ಚಿಗಿತುಕೊಳ್ಳುವುದಯ್ಯ. ನೀನು ಮೆಚ್ಚಿದರೆ ಬಂಜೆಯಾದ ಗೊಡ್ಡು ಪಶುವು ಕೂಡಾ ಹಾಲು, ಮೊಸರು, ಬೆಣ್ಣೆಗಳನ್ನು ಕೊಡುವ ಹಯನವಾಗುವುದಯ್ಯ. ನೀನು ಮೆಚ್ಚಿದರೆ ವಿಷವೇ ಅಮೃತವಾಗುವುದಯ್ಯ. ನೀನು ಮೆಚ್ಚಿದರೆ ಎಲ್ಲ ಪಡಿ ಪದಾರ್ಥವು ನಮ್ಮ ಎದುರಿನಲ್ಲಿಯೇ ಇರುವವು.

No comments: