ನಮಸ್ಕಾರ...!

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು!!!


ರಚನೆ: ಹುಯಿಗೋಳ ನಾರಾಯಣ ರಾವ್, ಸಂಗೀತ: ಪಿ. ಕಾಳಿಂಗ ರಾವ್

ಈ ತಾಣದಲ್ಲಿ ತಮಗೆ,

ಕನ್ನಡದ ಮೇರು ಕೃತಿಗಳ ಆಯ್ದ ಕೆಲವು ಭಾಗಗಳು, ಕನ್ನಡ ನಾಡು, ನುಡಿ, ಜಲ,ಪರಿಸರ ಸೊಬಗು ಇತ್ಯಾದಿಗಳ ವಿಶ್ಲೇಷಣೆ, ಕನ್ನಡ ಜನ, ಭಾಷೆ, ಸಂಸ್ಕೃತಿ,ಸಾಹಿತ್ಯ,ಸಂಗೀತ,ಪರಂಪರೆಗಳ ಕಿರು ಪರಿಚಯಗಳು,
ಭೌತಿಕ, ಆಧ್ಯಾತ್ಮಿಕ ವಿಷಯಗಳು


ಸವಿಯಲು ದೊರೈಯುತ್ತದೆ !!!

..ಜೊತೆಗೆ ನನ್ನ ಕೆಲವು ವಯಕ್ತೀಕ ಅಭಿಪ್ರಾಯಗಳು!!


ಸಿರಿಗನ್ನಡಂ ಗೆಳ್ಗೆ ಸಿರಿಗನ್ನಡಂ ಬಾಳ್ಗೆ!!

Thursday, 25 September 2008

ಅಹಂಕಾರವೆಂಬ ಅಂಧಕಾರ...!

ಪ್ರತಿಯೊಬ್ಬ ಮನುಷ್ಯನಿಗು ಅಹಂಕಾರ ಎನ್ನುವುದು ಒಂದಲ್ಲ ಒಂದು ರೀತಿಯಲ್ಲಿ ಇದ್ದೆ ಇರುತ್ತದೆ. ಕೆಲವರು ಅದನ್ನು ಕ್ಷಣದಲ್ಲಿ ಪ್ರದರ್ಶಿಸುತ್ತಾರೆ ಇನ್ನು ಕೆಲವರ ಬಗ್ಗೆ ಸ್ವಲ್ಪ ಸಮಯದ ನಂತರ ತೊರಲ್ಪಡುತ್ತದೆ.

ವಿಪರ್ಯಾಸ ಎಂದರೆ, ಅಹಂಕಾರವೆಂಬುದು ನಮ್ಮ ಸುಗಮವಾದ ಜೀವನಕ್ಕೆ ಒಂದು ದೊಡ್ಡ ಮುಳ್ಳು ಇದ್ದಂತೆ. ಅದನ್ನು ನಾವು ಬುಡದ ಸಮೇತ ಕಿತ್ತು ಬಿಸಾಡುವ ತನಕ ನಮ್ಮ ಏಳಿಗೆ ಅಸಾಧ್ಯ ಮತ್ತು ನಮ್ಮ ಜೀವನ ಅಪೂರ್ಣ.

ನಿಜವಾಗಿಯು ಹೇಳಬೇಕೆಂದರೆ, ಅಹಂಕಾರವು ಙ್ನಾನರ್ಥಿ ಹಾಗೂ ಙ್ನಾನ ಮಾರ್ಗಗಳ ನಡುವೆ ತೆರೆಯೆಳೆಯುತ್ತದೆ. ನಮ್ಮಲ್ಲಿರುವ ಕಲಿಕಾ ಗುಣವನ್ನು ಕಿತ್ತು ಕೊಳ್ಳುತ್ತದೆ. ಒಮ್ಮೆ ನಾವು ಕಲಿಯುವುದನ್ನು ಬಿಟ್ಟರೆ ಙ್ನಾನರ್ಜನೆ ತಾನಗಿಯೆ ನಿಂತುಕೊಳ್ಳುತ್ತದೆ. ಯಾವುದೇ ವ್ಯಕ್ತಿಯು ಅಹಂಕಾರಿಯಾದಗ ಆತ ತನ್ನನು ತಾನೆ ಒಂಟಿಯಾಗಿಸಿಕೊಳ್ಳುತ್ತಾನೆ. ಇದರಿಂದ ತಂದೆ, ತಾಯಿ, ಗುರು, ಹಿರಿಯರು, ಸ್ನೇಹಿತರು, ಬಂಧು ಬಾಂಧವರು ಎಲ್ಲರಿಂದ ದೂರ ತಳ್ಳಲ್ಪಟ್ಟು, ಪರಸ್ಪರ ತಾನೆ ಸಮಾಜದಿಂದ ದೂರವಾಗುತ್ತಾನೆ.

"ನಾವು ನೆಲ ನೋಡದೇ, ಆಕಾಶ ನೋಡಿಕೊಂಡು ನಡೆದರೆ ಎಡವಿ ಬೀಳುತ್ತೇವೆ". ಹಾಗಾಗಿ ನಮ್ಮ ಹಿರಿಯರು ಅಗಾಗ ಹೇಳುತ್ತಲೇ ಇರುತ್ತಾರೆ: "ನೆಲ ನೋಡಿ ನಡಿ ಆಕಾಶದಲ್ಲಿ ಹಾರಡಬೇಡ" ಎಂದು.

ನಾವು ಎಷ್ಟೇ ಉನ್ನತ ಮಟ್ಟಕ್ಕೆ ಬೆಳೆದರು, ನಾವು ಬಂದ ಹಾದಿಯನ್ನು, ಅನುಭವಿಸಿದ ಕಷ್ಟಗಳನ್ನು, ಪಟ್ಟ ಶ್ರಮಗಳನ್ನು ಮನನ ಮಾಡಿಕೊಳ್ಳುತ್ತಿರಬೇಕು ಆಗ ಸ್ವಲ್ಪ ಮಟ್ಟಿಗಾದರು ನಮ್ಮಲ್ಲಿರುವ ಅಹಂಭಾವನೆಯನ್ನು ತಗ್ಗಿಸಬಹುದು.

ಪ್ರಙ್ನಾಸ್ಥಿತಿಯೆಂಬ ಸಾಗರದಲ್ಲಿನ ಅಹಂ ಹುಟ್ಟುಡಗಿ ಹೋಗಿರುವ ಬಗ್ಗೆ ಸ್ಪಷ್ಟಪಡಿಸಿಕೊಳ್ಳಿ.ಹೃದಯದ ಒಳಗಿನ ಕತ್ತಲೆಯ ಕೊಣೆಯಲ್ಲಿ ಅದು ಎಲ್ಲಾದರು ಅಡಗಿ ಕುಳಿತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

"ಅಹಂವಿನ ದಾರಿಗಳು ಹಲವಾರು, ರೂಪಗಳು ಅಸಂಖ್ಯಾತ" ಆದರೆ
"ವಿನಯ ಮತ್ತು ವಿಧೇಯಕ ಭಾವನೆಗಳಿಂದ ಎಲ್ಲಾ ಅಹಂ ದಾರಿಗಳನ್ನು ಮತ್ತು ರೂಪಗಳನ್ನು ಸಂಪೂರ್ಣವಾಗಿ ನಾಶಪಡಿಸಬಹುದು".

"ಇಂದಿನ ದಿನವೇ ಶುಭ ದಿನ, ಇಂದಿನ ಗಳಿಘೇ ಶುಭ ಗಳಿಘೇ." ಹಾಗಿದ್ದರೆ ನಾವೆಲ್ಲ, ಇಂದಿನಿಂದ ಅಹಂ ಭಾವನೆಯನ್ನು ಬಿಟ್ಟು ಸರಳವಾಗಿ ಬದುಕಲು ಒಂದು ಪ್ರಾಮಾಣಿಕ ಪ್ರಯತ್ನ ಮಾಡೋಣವೇ?

ಬನ್ನಿ ನಾವೆಲ್ಲರೂ, "ಅಹಂ ಎನ್ನುವ ಅಂಧಕಾರದಿಂದ (ಕತ್ತಲಿನಿಂದ) ಹೊರಬಂದು, ಬೆಳಕಿನ ಕಡೆಗೆ ಸಾಗೋಣ...!"

No comments: