ನಮಸ್ಕಾರ...!

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು!!!


ರಚನೆ: ಹುಯಿಗೋಳ ನಾರಾಯಣ ರಾವ್, ಸಂಗೀತ: ಪಿ. ಕಾಳಿಂಗ ರಾವ್

ಈ ತಾಣದಲ್ಲಿ ತಮಗೆ,

ಕನ್ನಡದ ಮೇರು ಕೃತಿಗಳ ಆಯ್ದ ಕೆಲವು ಭಾಗಗಳು, ಕನ್ನಡ ನಾಡು, ನುಡಿ, ಜಲ,ಪರಿಸರ ಸೊಬಗು ಇತ್ಯಾದಿಗಳ ವಿಶ್ಲೇಷಣೆ, ಕನ್ನಡ ಜನ, ಭಾಷೆ, ಸಂಸ್ಕೃತಿ,ಸಾಹಿತ್ಯ,ಸಂಗೀತ,ಪರಂಪರೆಗಳ ಕಿರು ಪರಿಚಯಗಳು,
ಭೌತಿಕ, ಆಧ್ಯಾತ್ಮಿಕ ವಿಷಯಗಳು


ಸವಿಯಲು ದೊರೈಯುತ್ತದೆ !!!

..ಜೊತೆಗೆ ನನ್ನ ಕೆಲವು ವಯಕ್ತೀಕ ಅಭಿಪ್ರಾಯಗಳು!!


ಸಿರಿಗನ್ನಡಂ ಗೆಳ್ಗೆ ಸಿರಿಗನ್ನಡಂ ಬಾಳ್ಗೆ!!

Friday, 26 September 2008

ಮಾನವನ ತಿಳುವಳಿಕೆ

ಮಾನವ ಜೀವಿಯಾದವನು ಸಾಕಷ್ಟು ತಿಳಿದಿರುತ್ತಾನೆ. ಎಲ್ಲ ಬುದ್ಧಿ ಜೀವಿಗಳ ಸಮಸ್ಯೆಯೂ ಇದೆ. ತಮ್ಮ ತಿಳುವಳಿಕೆ ಬಗ್ಗೆ ಅತಿಯಾದ ಅಭಿಮಾನ ಪಡುತ್ತಾರೆ. ಆದರೆ ಆ ತಿಳುವಳಿಕೆಯನ್ನು ದೈನಂದಿನ ಜೀವನದಲ್ಲಿ ಅನುಸರಣೆಗೆ ತರುವ ಅಗತ್ಯವಿದೆ.

ಹೀಗಾಗದೇ ಹೋದಲ್ಲಿ, ಙಾನವು ಕೇವಲ ತಿಳಿಯುವಿಕೆಯ ಸೀಮೆಯೊಳಗಡೆಯೇ ಸೀಮಿತವಾಗಿ ಉಳಿದುಬಿಡುತ್ತದೆ. ಯಾವುದನ್ನು ಮಾಡಬೇಕು ಹಾಗು ಏನನ್ನು ಮಾಡಬಾರದು ಎಂಬುದನ್ನು ನಾವೆಲ್ಲಾ ತಿಳಿದಿದ್ದೇವೆ, ಆದರೆ ಹಾಗೆ ಬದುಕುವುದು ತುಂಬಾ ಕಷ್ಟ.

"ನಿಜವಾದ ಙಾನ ಗೋಚರವಾಗುವುದು ತಿಳಿಯುವುದರಲ್ಲಿ ಅಲ್ಲ, ನಿಜಕ್ಕೂ ಆ ರೀತಿ ನಡೆಯುವುದರಲ್ಲಿ."

No comments: