ನಮಸ್ಕಾರ...!

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು!!!


ರಚನೆ: ಹುಯಿಗೋಳ ನಾರಾಯಣ ರಾವ್, ಸಂಗೀತ: ಪಿ. ಕಾಳಿಂಗ ರಾವ್

ಈ ತಾಣದಲ್ಲಿ ತಮಗೆ,

ಕನ್ನಡದ ಮೇರು ಕೃತಿಗಳ ಆಯ್ದ ಕೆಲವು ಭಾಗಗಳು, ಕನ್ನಡ ನಾಡು, ನುಡಿ, ಜಲ,ಪರಿಸರ ಸೊಬಗು ಇತ್ಯಾದಿಗಳ ವಿಶ್ಲೇಷಣೆ, ಕನ್ನಡ ಜನ, ಭಾಷೆ, ಸಂಸ್ಕೃತಿ,ಸಾಹಿತ್ಯ,ಸಂಗೀತ,ಪರಂಪರೆಗಳ ಕಿರು ಪರಿಚಯಗಳು,
ಭೌತಿಕ, ಆಧ್ಯಾತ್ಮಿಕ ವಿಷಯಗಳು


ಸವಿಯಲು ದೊರೈಯುತ್ತದೆ !!!

..ಜೊತೆಗೆ ನನ್ನ ಕೆಲವು ವಯಕ್ತೀಕ ಅಭಿಪ್ರಾಯಗಳು!!


ಸಿರಿಗನ್ನಡಂ ಗೆಳ್ಗೆ ಸಿರಿಗನ್ನಡಂ ಬಾಳ್ಗೆ!!

Sunday, 28 December 2008

ಸಂಸ್ಕೃತಿ ಮತ್ತು ನಾಗರೀಕತೆ

ಸಂಸ್ಕೃತಿ ಮತ್ತು ನಾಗರೀಕತೆಗಳು ಒಂದು ಜನ ಸಮುದಾಯ, ರಾಷ್ಟ್ರ ಅಥವಾ ದೇಶದ ಜೀವನ ಸಂವಿಧಾನದ ಅವಿಭಾಜ್ಯ ಅಂಗಗಳು. ಚೆನ್ನಾಗಿ ಉಡುಪು ಧರಿಸಿದ ವ್ಯಕ್ತಿ ಸುಸಂಸ್ಕೃತನೆಂದು ಪರಿಗಣಿಸಲ್ಪಡುತ್ತಾನೆ. ಬೇರೆಯವರ ಜೊತೆಯಲ್ಲಿ ಚೆನ್ನಾಗಿ ಬೆರೆಯಬಲ್ಲ. ಆದರೆ ಇದಿಷ್ಟೇ ಆತನನ್ನು ಸುಸಂಸ್ಕೃತ ವ್ಯಕ್ತಿಯನ್ನಾಗಿ ಮಾಡಲಾರದು. ಒಂದು ದೇಶದ ಆಲೋಚನೆಗಳ ಹಾಗೂ ಭಾವನೆಗಳ ರೀತಿಯನ್ನು ನಾಗರಿಕತೆ ಸೂಚಿಸುತ್ತದೆ. ಆಹಿಂಸೆ, ಮಾನವೀಯತೆ, ನಿಷ್ಠೆ ಹಾಗೂ ವಿಧೇಯತೆ - ಇಂಥ ವಿಚಾರಗಳ ಬೆಳವಣಿಗೆ ಇತ್ಯಾದಿಗಳಲ್ಲಿ ಸಂಸ್ಕೃತಿಯು ಬದುಕಿನ ಬಾಹ್ಯ ವಿಧಾನ.

"ಸುಸಂಸ್ಕೃತಿಯು ಒಂದು ಪುಷ್ಪವಾದರೆ ನಾಗರೀಕತೆಯು ಅದರ ಪರಿಮಳ"

ಒಬ್ಬ ವ್ಯಕ್ತಿ ಬಡವನಿರಬಹುದು ಆದರೆ ಆತ ಸಭ್ಯ ವ್ಯಕ್ತಿಯಾಗಿರಬಹುದು. ಆದರೆ ಸಭ್ಯನಲ್ಲದ ಸುಸಂಸ್ಕೃತ ವ್ಯಕ್ತಿ ಲೌಕಿಕದಲ್ಲಿ ಯಶಃಪ್ರದನಾಗಿದನಾಗ್ಯು ಸಮಾಜಕ್ಕೆ ಆತನಿಂದ ಉಪಯೋಗವಿಲ್ಲ. ಯಾಕೆಂದರೆ ಅವನಲ್ಲಿ ರಾಷ್ಟ್ರದ ಹಾಗೂ ವ್ಯಕ್ತಿಗತವಾದ ಬೆಳವಣಿಗೆಯನ್ನು ಸಮೃದ್ಧಗೊಳಿಸಬಲ್ಲ ಆಂತರಿಕ ರೀತಿನೀತಿ ಮತ್ತು ಗುಣಗಳ ಅಭಾವ ಇರುತ್ತದೆ.

"ಸುಸಂಸ್ಕೃತಿಯು ಬಾಹ್ಯವಾದದ್ದು ನಾಗರೀಕತೆಯು ಆಂತರಿಕವಾದದ್ದು"

ಆಧುನಿಕ ಜಗತ್ತಿನಲ್ಲಿ ಇವರೆಡರ ಸಮೀಕರಣ ಅತ್ಯಗತ್ಯ.

ಭಾರತೀಯರ ನಾಗರೀಕತೆ ಅತಿ ಸಮೃದ್ಧವಾದದ್ದು, ಅದರ ಸಂಸ್ಕೃತಿಯು ತೋರಿಕೆಯ ಆಂಗ್ಲ ಸಂಸ್ಕೃತಿಯಾಗಿದೆ. ಇದರಿಂದ ನಾವು ಹೊರಬಂದರೆ "ಸಂಸ್ಕೃತಿ ಮತ್ತು ನಾಗರೀಕತೆಗೆ ಒಂದು ಮಾದರಿ ದೇಶ ಮತ್ತು ಜನ" ಎಂದು ಪ್ರಪಂಚದಲ್ಲಿ ಅನ್ನಿಸಿಕೊಳ್ಳಬಹುದು.

No comments: